
ಪ್ರಜಾವಾಣಿ ವಾರ್ತೆ
ಟೇಬಲ್ ಟೆನಿಸ್
(ಪಿಟಿಐ ಚಿತ್ರ)
ಹುಬ್ಬಳ್ಳಿ: ಧಾರವಾಡದ ಕಾಸ್ಮೋಸ್ ಕ್ಲಬ್ ವತಿಯಿಂದ ನವೆಂಬರ್ 20ರಿಂದ 23ರವರೆಗೆ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಏರ್ಪಡಿಸಲಾಗಿದೆ. 15, 17 ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರು ಮತ್ತು ಪುರುಷ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಆಸಕ್ತರು ನವೆಂಬರ್ 15ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ, https://karnatakatabletennis. web.app ಮೂಲಕವೂ ನೋಂದಣಿಗೆ ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ರೆಫರಿ ವೀರೇಶ ಕಲ್ಮಠ (98864 66576) ಅವರನ್ನು ಸಂಪರ್ಕಿಸಬಹುದು ಎಂದು ಕ್ಲಬ್‌ನ ಗೌರವ ಕಾರ್ಯದರ್ಶಿ ಕೆ.ಆರ್.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.