
ಧಾರವಾಡ: ನಗರದ 13 ನೇ ವಾರ್ಡ್‍ನಲ್ಲಿ ನಿರಂತರ ನೀರು ಪೂರೈಕೆ ವ್ಯವಸ್ಥೆ, ಸಿ.ಸಿ ರಸ್ತೆ ನಿರ್ಮಾಣ, ಒಳರಸ್ತೆಗಳಿಗೆ ಇಂಟರ್ ಲಾಕಿಂಗ್ ಪೇವರ್ಸ್ ಅಳವಡಿಕೆ, ಒಳಚರಂಡಿ ನಿರ್ಮಿಸಲಾಗಿದೆ. ಆದರೆ, ಗಟಾರ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಪೌರ ಕಾರ್ಮಿಕರ ಕೊರತೆ ಸೇರಿ ಹಲವು ಸಮಸ್ಯೆಗಳು ಯಥಾಸ್ಥಿತಿ ಇವೆ.
ಕುರಪಾಲಿಸ್ ಕಾಂಪೌಂಡ್ ಡಾಂಬರ್, ಸಪ್ತಾಪುರ, ಪಾಲಿಕೆ ವೃತ್ತದಿಂದ ಶಿವಾಜಿ ವೃತ್ತ, ಮರಾಠ ಕಾಲೊನಿ, ಹಳಿಯಾಳ ನಾಕಾ ರಸ್ತೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಹಿತಿ ಹಲವಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಸಪ್ತಾಪುರದ ಮೂರು ರಸ್ತೆಗಳಲ್ಲಿ ಒಳಚರಂಡಿ, ಸಿ.ಸಿ ರಸ್ತೆ ನಿರ್ಮಿಸಲಾಗಿದೆ.
ವಾರ್ಡ್‍ನಲ್ಲಿ ಗಟಾರಗಳಲ್ಲಿ ಕಸ, ಕಡಿ, ಹೂಳು ತುಂಬಿಕೊಂಡಿದೆ. ವಾರ್ಡ್‌ನ ವಿವಿಧೆಡೆ ನೀರು ಪೂರೈಕೆ ಯೋಜನೆಗಾಗಿ ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚಿಲ್ಲ. ಇಂಥ ಕಡೆ ತಗ್ಗುಗಳಾಗಿವೆ. ಸಪ್ತಾಪುರ ಮುಖ್ಯ ರಸ್ತೆ, ಡಯಟ್, ಪಾಲಿಕೆ ಕಚೇರಿ ಪಕ್ಕದ ರಸ್ತೆ, ನೀರಾವರಿ ಕಚೇರಿ ಸಹಿತ ಕೆಲವೆಡೆ ಒಳರಸ್ತೆಗಳು ಹದಗೆಟ್ಟಿವೆ.
ನಿವೇಶನ, ರಸ್ತೆ ಬದಿಗಳಲ್ಲಿ ಕಸ ಎಸೆಯಲಾಗಿದೆ. ಜಾನುವಾರುಗಳು ಹಂದಿ, ನಾಯಿಗಳು ಕಸದ ರಾಶಿ ಎಳೆದಾಡಿ ರಾಡಿ ಮಾಡುತ್ತವೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಕೆಲವಡೆ ಬೀದಿ ದೀಪಗಳ ಸಮಸ್ಯೆ ಇದ್ದು, ಅವುಗಳನ್ನು ಸರಿಪಡಿಸಬೇಕು ಎಂಬುದು ವಾರ್ಡ್ ನಿವಾಸಿಗಳ ಮೊರೆ. ಯುಪಿಎಸ್ ಸ್ಕೂಲ್, ಕಿಲ್ಲಾದ ಹನುಮ ದೇಗುಲ ಹಾಗೂ ಸೈದಾಪುರದಲ್ಲಿ ಮಿನಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂಬ ಬೇಡಿಕೆ ಇದೆ.
ಪಾಲಿಕೆಯ ₹1.50 ಕೋಟಿ ಅನುದಾನದಲ್ಲಿ ಸಂಚಾರ ಪೊಲೀಸ್ ಠಾಣೆಯ ಬಳಿ ಡಾಂಬರ್ ರಸ್ತೆ, ಗಟಾರ, ಪಾದಚಾರಿ ಮಾರ್ಗನಿರ್ಮಿಸಲಾಗಿದೆ. ₹1.60 ಕೋಟಿ ಅನುದಾನದಲ್ಲಿ ಕಡಪಾ ಮೈದಾನದಲ್ಲಿ ಗಟಾರ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ ವಿದ್ಯುತ್ ಕಂಬ ಅಳವಡಿಸಲಾಗುತ್ತಿದೆ. ₹80 ಲಕ್ಷ ಅನುದಾನದಲ್ಲಿ ಜಿಲ್ಲಾಆಸ್ಪತ್ರೆಯ ಆವರಣದ ಡಾಂಬರೀಕರಣ ಹಾಗೂ ಪೇವರ್ಸ್ ಅಳವಡಿಸಲಾಗಿದೆ. ಎಂದು ಪಾಲಿಕೆ ಸದಸ್ಯ ಸುರೇಶ ಬೇದರೆ ತಿಳಿಸಿದರು.
ಪ್ರಮುಖ ಬೇಡಿಕೆಗಳು ಆಝಾದ್ ಉದ್ಯಾನ ಅಭಿವೃದ್ಧಿಪಡಿಸಬೇಕು ಜುಬಿಲಿ ವೃತ್ತ ಸಹಿತ ಪ್ರಮುಖ ವೃತ್ತಗಳನ್ನು ಹೈಟೆಕ್ ಗೊಳಿಸಬೇಕು ಹೆಚ್ಚುವರಿ 20 ಪೌರಕಾರ್ಮಿಕರನ್ನು ಒದಗಿಸಬೇಕು
ವಾರ್ಡ್‍ನಲ್ಲಿ ಗಟಾರಗಳು ಹಾಳಾಗಿವೆ. ಹೊಸ ಗಟಾರಗಳನ್ನು ನಿರ್ಮಿಸಬೇಕು. ರಸ್ತೆ ಒಳಚರಂಡಿ ವ್ಯವಸ್ಥೆ ಚೆನ್ನಾಗಿದೆ.ನಿಯಮಿತವಾಗಿ ಕಸ ವಿಲೇವಾರಿಯಾಗುತ್ತದೆ.ಮಹಾಂತೇಶಗೌಡ ಪಾಟೀಲ ನಿವಾಸಿ ಸಪ್ತಾಪುರ
ರಸ್ತೆ ಪಕ್ಕ ವಿವಿಧಡೆ ಕಸ ಹಾಕಲಾಗುತ್ತದೆ. ‘ಬ್ಲಾಕ್ ಸ್ಪಾಟ್‘ ಸಹಿತ ವಾರ್ಡ್‌ನ ವಿವಿಧೆಡೆ ಸಿ.ಸಿ ಕ್ಯಾಮರಾ ಅಳವಡಿಸಬೇಕು. ವಾರ್ಡ್‍ನಲ್ಲಿ ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ.ಸುಮಂತ ಶೆಟ್ಟಿ ನಿವಾಸಿ ಕುರುಪಾಲಿಸ್ ಕಾಂಪೌಂಡ್
ಪ್ರಮುಖ ಬಡಾವಣೆಗಳು 13 ನೇ ವಾರ್ಡ್ ನಗರದ ಕೇಂದ್ರ ಸ್ಥಾನದಲ್ಲಿದೆ. ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪಂಚಾಯಿತಿ ಕಚೇರಿ ಪಾಲಿಕೆ ಕಚೇರಿ ತಹಶೀಲ್ದಾರ್ ಕಚೇರಿಮಿನಿವಿಧಾನ ಸೌಧ ಕೆಸಿಡಿ ಕಾಲೇಜು ಜಿಲ್ಲಾಸ್ಪತ್ರೆ ಕಲಾಭವನ ಧಾರವಾಡ ಕೋಟೆ ಶಿವಾಜಿ ವೃತ್ತ ಹಳಿಯಾಳ ನಾಕಾ ಸಪ್ತಾಪುರ ಮರಾಠ ಕಾಲೊನಿ ವಿಶ್ವಕರ್ಮ ವೃತ್ತ ಕೋರ್ಟ್ ವೃತ್ತ ಲೈನ್ ಬಜಾರ್ ವಿವೇಕಾನಂದ ವೃತ್ತ ಸಿಬಿಟಿ ದಾಸನಕೊಪ್ಪ ವೃತ್ತ ಜುಬಿಲಿ ವೃತ್ತ.
‘ಅಭಿವೃದ್ಧಿಗೆ ಆದ್ಯತೆ‘
ಶಾಸಕರ ಅನುದಾನದಲ್ಲಿ ವಿಶ್ವಕರ್ಮ ವೃತ್ತದಿಂದ ಹಳಿಯಾಳ ನಾಕಾದವರೆಗೆ ₹ 12 ಕೋಟಿ ಅನುದಾನದಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗಿದೆ. ಚರಂಟಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ₹ 3.20 ಕೋಟಿಯಲ್ಲಿ ಎಂಟು ಕೊಠಡಿ ಪಾಲಿಕೆ ವೃತ್ತದಿಂದ ಶಿವಾಜಿ ವೃತ್ತ ₹1.20 ಕೋಟಿ ಮರಾಠ ಕಾಲೊನಿ ₹1.10 ಕೋಟಿ ಸಿ.ಸಿ.ರಸ್ತೆ ನಿರ್ಮಿಸಲಾಗಿದೆ. ಸಪ್ತಾಪುರದಲ್ಲಿ ₹1.50 ಕೋಟಿ ಅನುದಾನದಲ್ಲಿ ಒಳಚರಂಡಿ ನಿರ್ಮಿಸಲಾಗಿದೆ. ₹1.20 ಕೋಟಿ ಅನುದಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಭಾಗದಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಕರ್ನಾಟಕ ಸ್ಕೂಲ್ ಭಾಗದಲ್ಲಿ ₹ 1.10 ಕೋಟಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ₹ 25 ಲಕ್ಷದಲ್ಲಿ ಕಾರ್ಗಿಲ್ ಸ್ತೂಪ ಅಭಿವೃದ್ಧಿಪಡಿಸಲಾಗಿದೆ ಎಂದು ವಾರ್ಡ್ ಸದಸ್ಯ ಸುರೇಶ ಬೇದರೆ ತಿಳಿಸಿದರು.
ವಾರ್ಡ್ ಮಾಹಿತಿ ವಾರ್ಡ್ ಸಂಖ್ಯೆ;13 ಪಾಲಿಕೆ ಸದಸ್ಯೆ;ಸುರೇಶ ಬೇದರೆ ಮೊ.ಸಂ; 9886904791 ಒಟ್ಟು ಆಸ್ತಿ;3912 ವಿದ್ಯುತ್ ಕಂಬಗಳು;1214 ಬೀದಿ ದೀಪ;1209
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.