ADVERTISEMENT

ಕಾಶ್ಮೀರ ಕುರಿತ ದಿಗ್ವಿಜಯ ಸಿಂಗ್‌ ಹೇಳಿಕೆ: ಸ್ವಷ್ಪನೆಗೆ ಪ್ರಲ್ಹಾದ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 13:07 IST
Last Updated 12 ಜೂನ್ 2021, 13:07 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮರು ಜಾರಿ ಮಾಡಲಾಗುವುದು ಎಂದು ‌ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಹೇಳಿಕೆ ವೈಯಕ್ತಿಕವಾದದ್ದೊ; ಪಕ್ಷದ ನಿಲುವು ಕೂಡ ಇದೇ ಆಗಿದೆಯೋ? ಎನ್ನುವುದನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ ತುಷ್ಠೀಕರಣ ರಾಜಕಾರಣಕ್ಕೆ ಮೊದಲಿನಿಂದಲೂ ಪ್ರಸಿದ್ಧಿಯಾಗಿದೆ. ದೇಶದ ಈಗಿನ ಎಲ್ಲ ಸಮಸ್ಯೆಗಳಿಗೆ ಆ ಪಕ್ಷವೇ ಮೂಲ ಕಾರಣ. ಕಾಂಗ್ರೆಸ್‌ ಭಾರತದಲ್ಲಿ ಎಲ್ಲರಲ್ಲಿಯೂ ಭಾರತೀಯರು ಎನ್ನುವ ಭಾವನೆ ಮೂಡಿಸಲಿಲ್ಲ. ಉಗ್ರಗಾಮಿಗಳ ಸಂಖ್ಯೆ ಹೆಚ್ಚಾಗಿ, ದೇಶವನ್ನು ಅಧೋಗತಿಗೆ ತಳ್ಳಲು ಕಾಂಗ್ರೆಸ್‌ ಕಾರಣ’ ಎಂದು ಟೀಕಿಸಿದರು.

ಇಂಧನ ಬೆಲೆ ನಿರಂತರ ಏರಿಕೆಯಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ’ಹಿಂದೆ ಆಡಳಿತ ನಡೆಸಿದ ಪಕ್ಷದ ಅವೈಜ್ಞಾನಿಕ ನಡೆಯಿಂದ ಈಗ ಈ ಪರಿಸ್ಥಿತಿ ತಲೆದೋರಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.