ADVERTISEMENT

10 ವರ್ಷದಿಂದ ಗಾಳ ಹಾಕುತ್ತಿದ್ದೆ, ಕಡೆಗೆ ಬಲೆ ಹಾಕಿ ಕರೆತಂದೆ: ಡಿ.ಕೆ. ಶಿವಕುಮಾರ್

ಮಧು ಬಂಗಾರಪ್ಪ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌.

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 8:49 IST
Last Updated 30 ಜುಲೈ 2021, 8:49 IST
ಡಿ.ಕೆ. ಶಿವಕುಮಾರ್‌ ಅವರ ಸಾಂದರ್ಭಿಕ ಚಿತ್ರ
ಡಿ.ಕೆ. ಶಿವಕುಮಾರ್‌ ಅವರ ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ‘ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ನಾನು,ನಾನು ಹತ್ತು ವರ್ಷದಿಂದ ಒಂದು ಮೀನಿಗೆ (ಮಧು ಬಂಗಾರಪ್ಪ ಅವರಿಗೆ) ಗಾಳ ಹಾಕುತ್ತಿದ್ದೆ. ಆದರೂ, ಬೀಳಲಿಲ್ಲ. ಕಡೆಗೆ ಬಲೆ ಹಾಕಿಯೇ ಕರೆದುಕೊಂಡು ಬಂದಿದ್ದೇನೆ’ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಧು ಬಂಗಾರಪ್ಪ ಮತ್ತು ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ರಾಜಕೀಯ ಗುರುವಿನ ಮಗನನ್ನು ನನ್ನ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದು ನನ್ನ ಭಾಗ್ಯ. ಅವರನ್ನು ವ್ಯಕ್ತಿಯಾಗಿ ಅಲ್ಲ, ಶಕ್ತಿಯಾಗಿ ನಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಮುಂಚೆಯೇ ಬಂದಿದ್ದರೆ, ಇಷ್ಟೊತ್ತಿಗೆ ಮಾಜಿ ಸಚಿವರಾಗಿರುತ್ತಿದ್ದರು’ ಎಂದರು.

ಶಾಸಕ ಎಚ್.ಕೆ. ಪಾಟೀಲ, ‘ಕಾಂಗ್ರೆಸ್‌ನಲ್ಲಿ ಮಧು ಅವರಿಗೆ ದೊಡ್ಡ ಭವಿಷ್ಯವಿದೆ. ನಿಮ್ಮ ಸಾಮರ್ಥ್ಯವನ್ನು ಪಕ್ಷ ಬಳಸಿಕೊಳ್ಳಲಿದೆ’ ಎಂದರು.

ADVERTISEMENT

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಎಸ್.ಆರ್. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಕೆ.ಎಸ್. ಮುನಿಯಪ್ಪ, ವೀರಣ್ಣ ಮತ್ತಿಕಟ್ಟಿ, ವಿ.ಆರ್. ಸುದರ್ಶನ್, ಐ.ಜಿ. ಸನದಿ, ಹಿಂಡಸಗೇರಿ, ಭೀಮಣ್ಣ ನಾಯ್ಕ, ಅಲ್ಲಂ ವೀರಭದ್ರಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.