ADVERTISEMENT

ಧಾರವಾಡ | ಈದ್ ಮಿಲಾದ್ ಸಂಭ್ರಮ: ಮೊಳಗಿದ ಪೈಗಂಬರ್ ಸಂದೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:13 IST
Last Updated 6 ಸೆಪ್ಟೆಂಬರ್ 2025, 5:13 IST
<div class="paragraphs"><p>ಈದ್ ಮಿಲಾದ್ ಅಂಗವಾಗಿ ಧಾರವಾಡದದಲ್ಲಿ ಶುಕ್ರವಾರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು</p></div>

ಈದ್ ಮಿಲಾದ್ ಅಂಗವಾಗಿ ಧಾರವಾಡದದಲ್ಲಿ ಶುಕ್ರವಾರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು

   

ಧಾರವಾಡ: ಪ್ರವಾದಿ ಮುಹಮ್ಮದ್ ಪೈಗಂಬರ್‌ ಜನ್ಮ ದಿನದ ಅಂಗವಾಗಿ ಮುಸ್ಲಿಮರು ಶುಕ್ರವಾರ ನಗರದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಚಿಣ್ಣರು, ಯುವಜನರು ಸಹಿತ ಹೊಸ ಬಟ್ಟೆ ಧರಿಸಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಅಂಜುಮನ್ ಸಂಸ್ಥೆಯಿಂದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯೂ ಭೂಸಪ್ಪ ಚೌಕ್, ಜಕ್ಕಣಿ ಬಾವಿ, ಕಾಮಣಕಟ್ಟಿ, ರೀಗಲ್ ವೃತ್ತ, ಮಾರ್ಗವಾಗಿ ಹಾದು ವಾಪಸ್ ಅಂಜುಮನ್ ಆವರಣ ತಲುಪಿ ಸಂಪನ್ನ ವಾಯಿತು. ಡಿ.ಜೆ ಸಂಗೀತ ಬಳಸದಿ ರುವುದು ವಿಶೇಷವಾಗಿತ್ತು.  ಮೆರವಣಿಗೆಗೆ ನಗರ ಸಹಿತ ಗ್ರಾಮೀಣ ಪ್ರದೇಶಗಳಿಂದ ಜನರು ಆಗಮಿಸಿದ್ದರು.

ಮೆರವಣಿಗೆಯುದ್ದಕ್ಕೂ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳ ಘೋಷಣೆಗಳು ಮೊಳಗಿದವು. ರಕ್ತದಾ ಯುವಜನರು, ಮಕ್ಕಳು ಹಸಿರು ಧ್ವಜ ಹಾಗೂ ರಕ್ತದಾನ ಮಾಡಿ ಜೀವ ಉಳಿಸಿ ಫಲಕಗಳನ್ನು ಹಿಡಿದು ಸಾಗಿಸಿದರು. ವಾಹನಗಳಲ್ಲಿ ಮೆಕ್ಕಾ-ಮದೀನಾ ಪ್ರತಿಕೃತಿಗಳು ಇದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನಗರದ ಪ್ರಮುಖ ವೃತ್ತಗಳಲ್ಲಿ ಕುಡಿಯುವ ನೀರು, ಸಿಹಿ ತಿಂಡಿ, ಪಾನಕ ವಿತರಿಸಿದರು.ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಷೀರ್ ಅಹಮದ್ ಜಾಗೀರದಾರ, ಎಸ್.ಎಸ್.ಸರಗಿರೋ, ರಫೀಕ್ ಶಿರಹಟ್ಟಿ, ಎನ್.ಎಂ.ಮಕಾಂದಾರ, ಇರ್ಫಾನ್ ತಾಡಪತ್ರಿ, ದೀಪಕ್ ಚಿಂಚೋರೆ, ರಿಯಾಜ್ ಪಾಲ್ಗೊಂಡಿದ್ದರು.

ಹಬ್ಬದ ಪ್ರಯುಕ್ತ ನಗರದಲ್ಲಿರುವ ಮಸೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ವಿವಿಧೆಡೆ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಅಳ್ನಾವರ:

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಇಲ್ಲಿನ ಶಾದಿ ಮಹಲ್‌ ಹಾಲ್‌ನಿಂದ ಆರಂಭವಾದ ಮೆರವಣಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಸಂಚರಿಸಿತು. ಮಿಲ್ಲತ್ ಪ್ರೌಢಶಾಲಾ ಮೈದಾನದಲ್ಲಿ ಧ್ವಜಾರೋಹಣ ನಡೆಯಿತು.  

ಶಾಲಾ ಮಕ್ಕಳಿಗೆ ಮುಹಮ್ಮದ್‌ ಪೈಗಂಬರ್‌ ಜೀವನ ಚರಿತ್ರೆ ಕುರಿತು ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಫಹೀಮ್ ಕಾಂಟ್ರ್ಯಾಕ್ಟರ್ ಹಾಗೂ ಗಣ್ಯರು ಬಹುಮಾನ ವಿತರಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಹಿರಿಯರಾದ ನದೀಮ್‌ ಕಾಂಟ್ರ್ಯಾಕ್ಟರ್ ಮಾತನಾಡಿದರು. ಅಬ್ದುಲ್‍ರಶೀದ ಖಾನಾಪೂರಿ, ಶಹಜಾನ ಬೀಡಿ, ನಬಿಸಾಬ ಮುಜಾವರ, ಶಬ್ಬೀರ ಬಾಗವಾನ, ಅದನಾನ ಮಕಾನಧಾರ, ಶಪೀಕ ಖತೀಬ, ತಯಬ್ ತೊಲಗಿ, ಜಾವಿದ್ ಕಿತ್ತೂರ, ಸಿಕಂದರ ಬಾಗವಾನ, ಇಮ್ರಾನ ಬೇಪಾರಿ, ಸಾದಿಕ ಅವರಾದಿ, ಅಷಪಾಕ ಮಕಾನದಾರ ಇದ್ದರು.

ಆಟೊ ಚಾಲಕರಿಂದ ಅನ್ನಸಂತರ್ಪಣೆ

ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಧಾರವಾಡ ನಗರದ ಹೊಸ ಬಸ್ ನಿಲ್ದಾಣದ ಆಟೊ ರಿಕ್ಷಾ ಚಾಲಕರ ಸಂಘದವರಿಂದ ಅನ್ನಸಂತರ್ಪಣೆ ನಡೆಯಿತು. ಜನರು ಸಾಲಿನಲ್ಲಿ ನಿಂತು ಊಟ ಸೇವಿಸಿದರು. ಈದ್‌ ಮಿಲಾದ್‌ ದಿನ ಅನ್ನ ಸ‌ಂತರ್ಪಣೆ ಮಾಡುತ್ತೇವೆ. 15 ವರ್ಷಗಳಿಂದ ಇದನ್ನು ರೂಢಿಸಿಕೊಂಡಿದ್ದೇವೆ. ಅನ್ನಸಂತರ್ಪಣೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ ಎಂದು ಸಂಘದ ಅಧ್ಯಕ್ಷ ಜಾಫರಖಾನ್ ರಾಟೀಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.