ಧಾರವಾಡ: ಸರ್ಕಾರವು ಪತ್ರಿಕಾ ವಿತರಕರಿಗೆ ಎಲೆಕ್ಟ್ರಿಕ್ ದ್ವಿಚಕ್ರವಾಹನ ಒದಗಿಸಬೇಕು ಎಂದು ಜಿಲ್ಲಾ ಪತ್ರಿಕಾ ವಿತರಕರ ಸಂಘ ಅಧ್ಯಕ್ಷ ಶಿವು ಹಲಗಿ ಹೇಳಿದರು.
ನಗರದ ಆಜಾದ್ ಉಪವನ ಬಳಿ ಬುಧವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿದರು. ‘ಪತ್ರಿಕಾವಿತರಕರ ವಿಮಾ ಸೌಲಭ್ಯದ ಮೊತ್ತವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು, ವಸತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಪತ್ರಿಕಾ ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು’ ಎಂದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಕೇಕ್ ಕಟ್ ಮಾಡಿ, ಸಂಭ್ರಮಿಸಿದರು.
ಪತ್ರಿಕಾ ವಿತರಕರಾದ ಕೃಷ್ಣ ಕುಲಕರ್ಣಿ, ಶೇಖರ ಬೇಲೂರ, ನಾಗರಾಜ ಕುಲಕರ್ಣಿ, ಶಿವರಾಮ ಶಿರಗುಪ್ಪಿ, ಪತ್ರೇಶ ಇಂಗದಾಳ, ಸುರೇಶ ಸುಣಗಾರ, ಬಸವರಾಜ ಗೊಂದಿ, ವೆಂಕಟೇಶ ಮೊದಲಿಯಾರ, ಗಜಾನನ ಭಟ್ ಮನೊಹರ ಮಠಪತಿ, ಶಶಿ ಕಬ್ಬೂರ, ರಾಜು ಮಂಟೆದ, ರವಿ ಮಲ್ಲಿಗವಾಡ, ಮಂಜು ಹಿರೇಮಠ, ಗಿರೀಶ ಮ್ಯಾಗೇರಿ, ಜಿಶಾನ ಬಾದಾಮಿ, ಜಗದೀಶ್ ಅವಗಾನ, ನಿರಂಜನ, ಕಾರ್ತಿಕ, ಅಸ್ಲಂ, ಮಲ್ಲು, ಶಶಿಕಾಂತ ನೀಲಾಕರಿ, ಮಂಜು ಕಠಾರೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.