ಹುಬ್ಬಳ್ಳಿ: ಸಮಾಜಮುಖಿ ಪ್ರಕಾಶನವು 16 ರಿಂದ 32 ವಯಸ್ಸಿನ ಯುವಜನರಿಗೆ ‘ಯುವ ಲೇಖನ ಸ್ಪರ್ಧೆ’ ಏರ್ಪಡಿಸಿದೆ. ಆಯ್ದ 5 ಲೇಖನಗಳಿಗೆ ತಲಾ ₹ 5 ಸಾವಿರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
‘ಕನ್ನಡಿಗರು ಉದ್ಯಮಶೀಲತೆಯಲ್ಲಿ ಏಕೆ ಹಿಂದೆ ಬಿದ್ದಿದ್ದಾರೆ? ಕನ್ನಡಿಗರು ಯಶಸ್ವಿ ಉದ್ಯಮಿಗಳಾಗಲು ಏನು ಮಾಡಬೇಕು’ ಎಂಬ ವಿಷಯದ ಕುರಿತು ಲೇಖನ ಬರೆಯಬೇಕು. ಲೇಖನವು 1,600 ರಿಂದ 2,000 ಪದಗಳ ಮಿತಿಯಲ್ಲಿ ಇರಬೇಕು. ಲೇಖನದ ಜೊತೆಗೆ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಲೇಖನ ಸಲ್ಲಿಕೆಗೆ ಕೊನೆಯ ದಿನ 15 ಸೆಪ್ಟೆಂಬರ್.
ಇಮೇಲ್ ವಿಳಾಸ: samajamukhi2017@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.