ಹುಬ್ಬಳ್ಳಿ: ‘ಹುಬ್ಬಳ್ಳಿ ಧಾರವಾಡ ಮಂದಿ (ಕರ್ನಾಟಕ) ಫೇಸ್‌ಬುಕ್ ಖಾತೆಯಲ್ಲಿ ‘ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕ ವೀರಶೈವ ಮುಖಂಡ ಅರವಿಂದ ಬೆಲ್ಲದ್’ ಎಂದು ಬರೆದು ಅವರ ಫೋಟೊ ಜೊತೆ ಬೆಲ್ಲದ್ ಬೆಂಬಲಿಗರು ಮಾಡಿದ್ದಾರೆ ಎನ್ನಲಾದ ಪೋಸ್ಟ್ ಭಾನುವಾರ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವ ಜಗದೀಶ ಶೆಟ್ಟರ್, ‘ಫೇಸ್‌ಬುಕ್‌ಗೆ ಫೇಸ್ ವ್ಯಾಲ್ಯೂ ಇಲ್ಲದಂತಾಗಿದೆ. ಅದರಲ್ಲಿ ಯಾರು ಬೇಕಾದರೂ ಖಾತೆ ತೆರೆದು, ಏನು ಬೇಕಾದರೂ ಪೋಸ್ಟ್ ಮಾಡಬಹುದು.ನಾನೇ ಪ್ರಧಾನಿ ಎಂದು ಸಹ ಪೋಸ್ಟ್ ಮಾಡಬಹುದು. ಬೆಲ್ಲದ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಯಾರು ಪೋಸ್ಟ್ ಮಾಡಿದ್ದಾರೋ ಅವರನ್ನೇ ಕೇಳಿ’ ಎಂದರು.
ಈ ಕುರಿತು ಶಾಸಕ ಅರವಿಂದ ಬೆಲ್ಲದ ಅವರಿಗೆ ಕರೆ ಮಾಡಿದಾಗ, ಪ್ರತಿಕ್ರಿಯೆಗೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.