ADVERTISEMENT

ನರೇಂದ್ರ, ಗಬ್ಬೂರು ಟೋಲ್‌ಗೇಟ್‌: ಮಾರ್ಚ್‌ನಿಂದ ಫಾಸ್ಟ್ಯಾಗ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 10:38 IST
Last Updated 17 ಜನವರಿ 2020, 10:38 IST
 ಹುಬ್ಬಳ್ಳಿಯ ಗಬ್ಬೂರು ಟೋಲ್‌ಗೇಟ್‌ನಲ್ಲಿ ಗುರುವಾರ ವಾಹನ ಚಾಲಕರು ಟೋಲ್‌ ಟಿಕೆಟ್‌ ಪಡೆಯುತ್ತಿರುವ ದೃಶ್ಯ ಕಂಡುಬಂದಿತು –ಪ್ರಜಾವಾಣಿ ಚಿತ್ರ
 ಹುಬ್ಬಳ್ಳಿಯ ಗಬ್ಬೂರು ಟೋಲ್‌ಗೇಟ್‌ನಲ್ಲಿ ಗುರುವಾರ ವಾಹನ ಚಾಲಕರು ಟೋಲ್‌ ಟಿಕೆಟ್‌ ಪಡೆಯುತ್ತಿರುವ ದೃಶ್ಯ ಕಂಡುಬಂದಿತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಾದುಹೋಗಿರುವ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯ ಗಬ್ಬೂರು ಮತ್ತು ನರೇಂದ್ರ ಟೋಲ್‌ಗೇಟ್‌ನಲ್ಲಿ ಮಾರ್ಚ್‌ನಿಂದ ಫಾಸ್ಟ್ಯಾಗ್‌ ವ್ಯವಸ್ಥೆ ಜಾರಿಗೆ ಬರಲಿದೆ.

ದೇಶಾದ್ಯಂತ ಇರುವ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ಮೂಲಕವೇ ಟೋಲ್‌ ಸಂಗ್ರಹಿಸುವ ವ್ಯವಸ್ಥೆ ಗುರುವಾರದಿಂದ ಜಾರಿಗೆ ಬಂದಿದೆ. ಆದರೆ, ಈ ಎರಡೂ ಟೋಲ್‌ಗೇಟ್‌ನಲ್ಲಿ ಖಾಸಗಿ ಕಂಪನಿಯಾದ ‘ನಂದಿ ಹೈವೇ ಡೆವಲಪರ್ಸ್‌ ಲಿಮಿಟೆಡ್‌’ ಪಾಸ್ಟ್ಯಾಗ್‌ ಬದಲು ಹಳೆಯ ವ್ಯವಸ್ಥೆಯಂತೆ ಟಿಕೆಟ್‌ ಮೂಲಕವೇ ವಾಹನಗಳಿಂದ ಶುಲ್ಕ ಸಂಗ್ರಹಿಸುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಂದಿ ಹೈವೇ ಡೆವಲಪರ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಎಸ್‌.ಎಂ., ಸದ್ಯ ಎರಡೂ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆಗೆ ಅಗತ್ಯವಿರುವ ಕೇಬಲ್‌, ಸ್ಕ್ಯಾನರ್‌ ಸೇರಿದಂತೆ ತಾಂತ್ರಿಕ ಉಪಕರಣಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಿದ್ದು, ಮಾರ್ಚ್‌ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೀಗಾಗಿ ವಾಹನ ಸವಾರರು ಈ ಹಿಂದಿನಂತೆ ಟೋಲ್‌ ಟಿಕೆಟ್‌ ಪಡೆದೇ ಸಾಗಬೇಕಾಗಿದೆ ಎಂದು ಹೇಳಿದರು.

ADVERTISEMENT

ನರೇಂದ್ರ ಮತ್ತು ಗಬ್ಬೂರು ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆ ಅಳವಡಿಕೆಗೆ ಜನವರಿ ಆರಂಭದಲ್ಲಿ ಸರ್ಕಾರದಿಂದ ಆದೇಶ ಬಂದಿದೆ. ಹೀಗಾಗಿ ನೂತನ ತಂತ್ರಜ್ಞಾನ ಅಳವಡಿಕೆ ಕಾಮಗಾರಿ ಇದೀಗ ಆರಂಭಿಸಲಾಗಿದೆ ಎಂದರು.

ಪ್ರತಿ ನಿತ್ಯ ಈ ಮಾರ್ಗದಲ್ಲಿ ಸರಾಸರಿ ಎಂಟು ಸಾವಿರ ವಾಹನಗಳು ಸಾಗುತ್ತವೆ. ಏಕ್ಸಿಸ್‌ ಮತ್ತು ಎಸ್‌ಬಿಐ ಬ್ಯಾಂಕ್‌ ಪ್ರತಿನಿಧಿಗಳು ಫಾಸ್ಟ್ಯಾಗ್‌ ವಿತರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.