ADVERTISEMENT

ಕಲಘಟಗಿ: ಕೊರೊನಾ ಸೇನಾನಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:27 IST
Last Updated 22 ಡಿಸೆಂಬರ್ 2021, 16:27 IST
ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಹತ್ತಿರ ಇರುವ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು
ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಹತ್ತಿರ ಇರುವ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು   

ಕಲಘಟಗಿ: ದೇಶದ 100 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಹಾಕುವ ಕೆಲಸವನ್ನು ನಿರಂತರವಾಗಿ ಮಾಡಲು ಕೈ ಜೋಡಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಅಪಾರವಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಹತ್ತಿರದ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಆರೋಗ್ಯ ಇಲಾಖೆ ಶುಶ್ರೂಷಕರು ಮತ್ತು ಪೌರ ಕಾರ್ಮಿಕರು ಸೇರಿದಂತೆ ಸುಮಾರು 1200 ಮಹಿಳಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಅವರು ಮಾತನಾಡಿದರು.

‘ಜೀವದ ಹಂಗು ತೊರೆದು ಮನೆಮನೆಗೆ ತೆರಳಿ ಸೇವೆ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು. ನಮ್ಮ ಪೌರಕಾರ್ಮಿಕರಿಗೆ ಕನಿಷ್ಠ ವೇತನ ₹15,000 ಸಿಗುತ್ತಿದ್ದರೆ ಅದಕ್ಕೆ ನನ್ನ ಶ್ರಮ ಕೂಡ ಇದೆ’ ಎಂದರು.

ADVERTISEMENT

ಮಾಜಿ ಸಚಿವ ಚೆಲುವ ನಾರಾಯಣಸ್ವಾಮಿ ಮಾತನಾಡಿ ‘ಕಲಘಟಗಿ ಮತಕ್ಷೇತ್ರಕ್ಕೆ ಸಂತೋಷ ಲಾಡ್ ಅವರ ಕೊಡುಗೆ ಸಾಕಷ್ಟಿದೆ’ ಎಂದರು. ಕೆಪಿಪಿಸಿ ವಕ್ತಾರ ಕವಿತಾ ರೆಡ್ಡಿ, ದೇವಕಿ ಯೋಗನಂದ, ಮಾಜಿ ಸಂಸದ ಐ.ಜಿ ಸನದಿ ಮಾತನಾಡಿದರು.

ಮಾಜಿ ಸಚಿವ ಎಂ.ಎಂ ಹಿಂಡಸಗೇರಿ, ಮುಖಂಡರಾದ ಮೋಹನ ಹಿರೇಮನಿ, ಅಲ್ತಾಫ್ ಕಿತ್ತೂರ, ಎಸ್. ಆರ್ ಪಾಟೀಲ, ದಾನಪ್ಪ ಕಬ್ಬೇರ, ಮಂಜುನಾಥ ಮುರಳ್ಳಿ, ಲಿಂಗರಡ್ಡಿ ನಡುವಿನಮನಿ, ಇಸ್ಮಾಯಿಲ್ ತಮಟಗಾರ, ಅಜ್ಮತ ಜಾಗೀರದಾರ, ಯಲ್ಲಪ್ಪ ದಾಸನಕೂಪ್ಪ, ಆನಂದ ಕಲಾಲ, ನರೇಶ ಮಲೆನಾಡು, ಗುರು ಬೆಂಗೇರಿ, ಗಂಗಾಧರ ಚಿಕ್ಕಮಠ, ಶಿವಲಿಂಗ ಮೂಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.