ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಗೋಡೆಯನ್ನು ತೆರವು ಮಾಡಲಾಗಿದೆ. ಶುಕ್ರವಾರ ರಾತ್ರಿಯೇ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿ, ಬೆಳಕು ಹರಿಯುವುದರ ಒಳಗೆ ಗೋಡೆ ತೆರವು ಕಾರ್ಯ ಮುಕ್ತಾಯಗೊಳಿಸಲಾಗಿದೆ.
ಮೈದಾನದ ಸುತ್ತ ಇರುವ ಕಬ್ಬಿಣದ ತಡೆಗೋಡೆಯನ್ನು ಮೊದಲು ಗ್ಯಾಸ್ ಕಟರ್‌ನಿಂದ ಕತ್ತರಿಸಿ, ನಂತರ ತಳಪಾಯದ ಕಾಂಕ್ರೀಟ್ ಅನ್ನು ಜೆಸಿಬಿಯಿಂದ ಒಡೆಯಲಾಗಿದೆ. ಮೈದಾನದ ಮಧ್ಯ ಭಾಗದಲ್ಲಿರುವ ಈದ್ಗಾ ಕಟ್ಟಡಕ್ಕೆ, ತಗಡಿನ ಶೀಟ್ ಅಳವಡಿಸಿ ರಕ್ಷಣೆ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.