ADVERTISEMENT

ಯುವತಿ ಜೊತೆ ಫೋಟೊ ತೆಗೆಸಿ AI ಎಡಿಟ್ ಮಾಡಿ ಮತಾಂತರಕ್ಕೆ ಬಲವಂತ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 19:21 IST
Last Updated 9 ಫೆಬ್ರುವರಿ 2026, 19:21 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಯುವತಿ ಜೊತೆ ಫೋಟೊ ತೆಗೆಸಿಕೊಂಡು ಎಐನಲ್ಲಿ ಎಡಿಟಿಂಗ್ ಮಾಡಿ, ಮತಾಂತರಕ್ಕೆ ಬಲವಂತ ಮಾಡಿದ ವ್ಯಕ್ತಿಯ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ರಾಜನಗರದ ನಿವಾಸಿ ಜಾಫರ್ ವಿರುದ್ಧ, ಧಾರವಾಡದ ಯುವತಿ ಗೀತಾ ಅವರ ತಾಯಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?: 'ಜಾಫರ್ ಮತ್ತು ಗೀತಾ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಪರಸ್ಪರ ಸ್ನೇಹದಿಂದ ಇದ್ದರು. ಮಗಳನ್ನು ಪುಸಲಾಯಿಸಿ ಜಾಫರ್‌ನು, ಅವಳ ಜೊತೆ ಫೋಟೊ ತೆಗೆಸಿಕೊಂಡು ಎಐನಲ್ಲಿ ಎಡಿಟ್ ಮಾಡಿ ಮೊಬೈಲ್‌ ಫೋನ್‌ಲ್ಲಿ ಇಟ್ಟುಕೊಂಡಿದ್ದ. ತನ್ನ ಜೊತೆಗೆ ಬರದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, ₹1.50 ಲಕ್ಷ ಪಡೆದಿದ್ದ. ಮಾನಸಿಕ ಕಿರುಕುಳ ನೀಡಿ, ಮತಾಂತರ ಮಾಡುವ ಉದ್ದೇಶದಿಂದ ಅವಳನ್ನು ದರ್ಗಾಕ್ಕೆ ಕರೆದೊಯ್ದು ತಾಯಿತ ಕಟ್ಟಿಸಿ ಜೀವ ಬೆದರಿಕೆ ಹಾಕಿದ್ದಾನೆ' ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.