ADVERTISEMENT

ಅಂಚೆ ಸಿಬ್ಬಂದಿಯಿಂದ ವಂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:36 IST
Last Updated 17 ಫೆಬ್ರುವರಿ 2022, 7:36 IST

ಹುಬ್ಬಳ್ಳಿ: ತಾಲ್ಲೂಕಿನ ಶಿರುಗುಪ್ಪಿ ಗ್ರಾಮದ‌ ಅಂಚೆ ಕಚೇರಿಯಲ್ಲಿ ಕಾರ್ಯಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ ಜಾಮೇಲಪ್ಪ, ಖಾತೆದಾರರಾದ ದೀಪಾ ಹಿರೇಮಠ ಅವರ ₹25 ಸಾವಿರವನ್ನು ಸ್ವಂತ ಬಳಕೆ ಮಾಡಿಕೊಂಡು ವಂಚಿಸಿರುವ ಕುರಿತು ಗ್ರಾಮೀಣ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಉಳಿತಾಯ ಖಾತೆಗೆ ಜಮಾ ಮಾಡಲೆಂದು ದೀಪಾ ಅವರು, ಪ್ರಕಾಶ ಬಳಿ ಹಣ ನೀಡಿದ್ದರು. ಆದರೆ, ಆರೋಪಿ ಖಾತೆಗೆ ಹಣ ಜಮಾ ಮಾಡದೆ, ಅವರ ಪಾಸ್‌ ಬುಕ್‌ನಲ್ಲಿ ಹಣ ಸ್ವೀಕರಿಸಿರುವ ಕುರಿತು ಇಲಾಖೆ ಸೀಲ್‌ ಜೊತೆ ಸಹಿ ಹಾಕಿ ನಂಬಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ: ಮೊಬೈಲ್‌ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಗೆ ಹಾಕಿರುವ ಪ್ರಕರಣ ಬೆಂಗೇರಿ ಬಳಿಯ ವೆಂಕಟೇಶ ಕಾಲೊನಿಯಲ್ಲಿ ನಡೆದಿದೆ.

ADVERTISEMENT

ಚೇತನ ವಿಹಾರದ ಮಹ್ಮದ್‌ ಶೇಖಸನದಿ ಹಲ್ಲೆಗೊಳಗಾದ ವ್ಯಕ್ತಿ. ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸದಾ ಮೊಬೈಲ್‌ನಲ್ಲಿ ಆಡವಾಡುತ್ತಿದ್ದ. ಕೆಲಸದ ವೇಳೆ ಆಟವಾಡಬೇಡ ಎಂದು ಹೇಳಿದ್ದಕ್ಕೆ, ಕೋಪಗೊಂಡು ಕಲ್ಲಿನಿಂದ ಅವರ ಮುಖಕ್ಕೆ ಹೊಡೆದು ಗಾಯಪಡಿಸಿದ್ದಾನೆ. ಅಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.