ADVERTISEMENT

ಹುಬ್ಬಳ್ಳಿ | ಮಹಿಳೆಗೆ ₹30.50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಮೇ 2023, 5:55 IST
Last Updated 25 ಮೇ 2023, 5:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ ₹30.50 ಲಕ್ಷ ವಂಚಿಸಲಾಗಿದೆ. ಧಾರವಾಡದ ಸುಣಗಾರ ಚಾಳ ನಿವಾಸಿ, ಸದ್ಯ ಜರ್ಮನಿಯಲ್ಲಿ ಉದ್ಯೋಗಿಯಾಗಿರುವ ಲಕ್ಷ್ಮಿ ಜಾಧವ ಹಣ ಕಳೆದುಕೊಂಡವರು.

ಟಿಂಡರ್ ಡೇಟಿಂಗ್ ಆ್ಯಪ್‌ ಮೂಲಕ ಲಕ್ಷ್ಮಿ ಅವರಿಗೆ ಪರಿಚಯವಾಗಿರುವ ವ್ಯಕ್ತಿ, ತಾನು ಮಿರ‍್ಯಾಕ ಬೈಯೊಟೆಕ್ ಸೀಡ್ಸ್ ಕಂಪನಿಯಲ್ಲಿ ಷೇರುದಾರನಾಗಿದ್ದು, ಇಲ್ಲಿ ಹಣ ಹೂಡಿಕೆ ಮಾಡಿದರೆ ಶೇ 30ರಷ್ಟು ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಲಕ್ಷ್ಮಿ ಅವರು ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ಆತ ಹಣ ನೀಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಲಕ್ಷ್ಮಿ ಅವರ ಸಹೋದರಿ ಜ್ಯೋತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.