ADVERTISEMENT

ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಪೂರಕ ಮನೆಪಾಠ: ಭಾರತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:50 IST
Last Updated 12 ಫೆಬ್ರುವರಿ 2026, 6:50 IST
ಹುಬ್ಬಳ್ಳಿಯ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿನ ಸೇವಾ ಸದನದಲ್ಲಿ ವಿದ್ಯಾವಿಕಾಸ ಪ್ರಕಲ್ಪ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ವಾರ್ಷಿಕೋತ್ಸವ ನಡೆಯಿತು
ಹುಬ್ಬಳ್ಳಿಯ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿನ ಸೇವಾ ಸದನದಲ್ಲಿ ವಿದ್ಯಾವಿಕಾಸ ಪ್ರಕಲ್ಪ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ವಾರ್ಷಿಕೋತ್ಸವ ನಡೆಯಿತು   

ಹುಬ್ಬಳ್ಳಿ: ‘ಸೇವಾಭಾರತಿ ಸಂಸ್ಥೆಯ ಮೂಲಕ ದೇಶದಾದ್ಯಂತ ಸಾವಿರಾರು ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ವಿದ್ಯಾವಿಕಾಸ ಪ್ರಕಲ್ಪ ಸಮಿತಿ ಪ್ರಾಂತ ಕಾರ್ಯದರ್ಶಿ ರಾಚಯ್ಯಾ ವಾರಿಕಲ್ಮಠ ತಿಳಿಸಿದರು.

ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿನ ಸೇವಾ ಸದನದಲ್ಲಿ ಈಚೆಗೆ ನಡೆದ ವಿದ್ಯಾವಿಕಾಸ ಪ್ರಕಲ್ಪ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಪ್ರಾಂತ ಸಮಿತಿ ಅಧ್ಯಕ್ಷೆ ಭಾರತಿ ನಂದಕುಮಾರ ಮಾತನಾಡಿ, ‘ಕರ್ನಾಟಕ ಉತ್ತರ ಪ್ರಾಂತದಲ್ಲಿ 300 ಮನೆಪಾಠ ಕೇಂದ್ರಗಳು ನಡೆಯುತ್ತಿವೆ. ಇಲ್ಲಿ ಶಾಲಾ ಶಿಕ್ಷಣದ ಜೊತೆಗೆ ಸಂಸ್ಕಾರ, ನೀತಿ ಕತೆ, ಭಗವದ್ಗೀತೆ, ವಚನ, ದೋಹೆ, ಕಗ್ಗ, ಕ್ರಾಫ್ಟ್ ಸೇರಿದಂತೆ ಶಾರೀರಿಕ– ಬೌದ್ಧಿಕ ವಿಕಾಸಕ್ಕೆ ಅಗತ್ಯವಿರುವ ವಿವಿಧ ತರಬೇತಿ ನೀಡಲಾಗುತ್ತಿದೆ’ ಎಂದರು.

ADVERTISEMENT

ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಪೂರ್ಣಚಂದ್ರರಾವ್ ಘಂಟಸಾಲ, ವಿದುಷಿ ಹೇಮಾ ವಾಘಮೋಡೆ, ವಿಜಯಕುಮಾರ ಶೆಟ್ಟರ್, ಶ್ರೀಧರ ನಾಡಿಗೇರ, ಕೃಷ್ಣ ಕುಲಕರ್ಣಿ, ಶಿಲ್ಪಾ ಶೆಟ್ಟರ್, ಮಹಾದೇವ ಕರಮರಿ, ಶಂಕರ ಗುಮಾಸ್ತೆ, ಎಚ್.ಎನ್. ನಂದಕುಮಾರ ಪಾಲ್ಗೊಂಡರು.

65 ಮನೆಪಾಠ ಕೇಂದ್ರಗಳಿಂದ 800 ಮಕ್ಕಳು, 65 ಶಿಕ್ಷಕಿಯರು, ಕಾರ್ಯಕರ್ತರು, ಪಾಲಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.