ADVERTISEMENT

ಧಾರವಾಡ | ಬಾಲಕಿ ಸಾವು; ಡೆಂಗಿ ಶಂಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 16:03 IST
Last Updated 27 ಜುಲೈ 2024, 16:03 IST
<div class="paragraphs"><p>ಸಾವು</p></div>

ಸಾವು

   

(ಸಾಂದರ್ಭಿಕ ಚಿತ್ರ)

ಧಾರವಾಡ: ಶಂಕಿತ ಡೆಂಗಿ ಜ್ವರದಿಂದಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಂದಗೋಳ ತಾಲ್ಲೂಕಿನ ಹಿರೇನರ್ತಿಯ ಐದು ವರ್ಷದ ಬಾಲಕಿ ಪೂರ್ಣಾ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ.

ADVERTISEMENT

‘ಇದು ಶಂಕಿತ ಡೆಂಗಿ ಪ್ರಕರಣ. ಎನ್‌ಎಸ್‌1 ಪರೀಕ್ಷೆಯಲ್ಲಿ ಡೆಂಗಿ ಕಂಡುಬಂದಿದೆ. ಐಜಿಎಂ ಪರೀಕ್ಷೆಯಲ್ಲಿ ದೃಢಪಟ್ಟಿಲ್ಲ. ಬಾಲಕಿ ಟೈಫಾಯ್ಡ್‌ನಿಂದಲೂ ಬಳಲುತ್ತಿದ್ದರು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಶಿ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲಕಿಗೆ ಕೆಲ ದಿನಗಳಿಂದ ಜ್ವರ ಇತ್ತು. ಪೋಷಕರು ಊರಿನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಗುಣಮುಖವಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.