ADVERTISEMENT

ಕೆಜಿಎಫ್ –ಚಾಪ್ಟರ್ 2: ಹುಬ್ಬಳ್ಳಿಯಲ್ಲಿ ಭರ್ಜರಿ ಓಪನಿಂಗ್, ಚಿತ್ರಮಂದಿರ ಭರ್ತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 6:52 IST
Last Updated 14 ಏಪ್ರಿಲ್ 2022, 6:52 IST
ಹುಬ್ಬಳ್ಳಿಯ ಸುಧಾ ಚಿತ್ರಮಂದಿರ
ಹುಬ್ಬಳ್ಳಿಯ ಸುಧಾ ಚಿತ್ರಮಂದಿರ   

ಹುಬ್ಬಳ್ಳಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಲನಚಿತ್ರ ‘ಕೆಜಿಎಫ್- ಚಾಪ್ಟರ್‌ 2’ ಗೆ ಹುಬ್ಬಳ್ಳಿಯಲ್ಲಿ ಗುರುವಾರ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ದಿನದ ಪ್ರದರ್ಶನದ ಎರಡು ಷೋಗಳಿಗೆ ಚಿತ್ರಮಂದಿರಗಳು ಭರ್ತಿಯಾಗಿವೆ. ಮೊದಲ ಷೋ ಬೆಳಿಗ್ಗೆ 8.30ಕ್ಕೆ ಆರಂಭಗೊಂಡಿದೆ.

ಚಲನಚಿತ್ರ ತೆರೆ ಕಂಡಿರುವ ಇಲ್ಲಿನ ಸುಧಾ ಮತ್ತು ಅಪ್ಸರ ಚಿತ್ರಮಂದಿರಗಳ ಎದುರು ಬೆಳಿಗ್ಗೆಯೇ‌ ಜಮಾಯಿಸಿದ ಯಶ್ ಅಭಿಮಾನಿಗಳು, ಕಟೌಟ್ ಹಾಗೂ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದರು. ಚಿತ್ರಮಂದಿರದ ಎದುರು ಕುಣಿದು ಕುಪ್ಪಳಿಸಿದರು‌.

ಮುಂಗಡವಾಗಿಯೇ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಿದ್ದರಿಂದ, ತಡವಾಗಿ ಬಂದ ಸಿನಿಮಾ ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಸೆಗೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.