ADVERTISEMENT

ಧಾರವಾಡ: ಸಾರಿಗೆ ಬಸ್‌ಗಳ ಮೇಲೆ ಗುಟ್ಕಾ ಜಾಹಿರಾತು ತೆರವಿಗೆ ಆಗ್ರಹ 

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:01 IST
Last Updated 21 ಜನವರಿ 2026, 6:01 IST
<div class="paragraphs"><p>ಧಾರವಾಡದ ಸಿಬಿಟಿ ಬಳಿ ಎಐಡಿವೈಒ ಜಿಲ್ಲಾ ಘಟಕದವರು ಮಂಗಳವಾರ ಪ್ರತಿಭಟನೆ ನಡೆಸಿದರು</p></div>

ಧಾರವಾಡದ ಸಿಬಿಟಿ ಬಳಿ ಎಐಡಿವೈಒ ಜಿಲ್ಲಾ ಘಟಕದವರು ಮಂಗಳವಾರ ಪ್ರತಿಭಟನೆ ನಡೆಸಿದರು

   

ಧಾರವಾಡ: ಸಾರಿಗೆ ಬಸ್‌ಗಳಲ್ಲಿ ಅಂಟಿಸಿರುವ ಗುಟ್ಕಾ ಜಾಹಿರಾತು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಎಐಡಿವೈಒ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. 

ಸಿಬಿಟಿ (ಸಿಟಿ ಬಸ್‌ ಟರ್ಮಿನಲ್‌) ಎದುರು  ಸಮಾವೇಶ‌ಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಗುಟ್ಕಾ ಸೇವನೆಯು ಆರೋಗ್ಯಕ್ಕೆ ಮಾರಕ. ಕೂಡಲೇ ಗುಟ್ಕಾ ಜಾಹಿರಾತುಗಳನ್ನು ಸಾರಿಗೆ ಸಂಸ್ಥೆಯವರು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಜನರು ದುಶ್ಚಟಗಳ ಗೀಳು ಬೆಳೆಸಿಕೊಳ್ಳದಂತೆ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಆದಾಯದ ನೆಪದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಗುಟ್ಕಾ ಜಾಹಿರಾತು ಹಾಕಲು ಅವಕಾಶ ನೀಡಿರುವುದು ಖಂಡನೀಯ’ ಎಂದರು.

 ಡಿಪೊ ವ್ಯವಸ್ಥಾಪಕಗೆ ಮನವಿ ಪತ್ರ ಸಲ್ಲಿಸಲಾಯಿತು. ಭವಾನಿ ಶಂಕರ್ ಗೌಡ, ಪ್ರೀತಿ ಸಿಂಗಾಡಿ, ಸಿಮೋನ್ ಸೂರ್ಯವಂಶಿ, ನವೀನ್ ಮುದ್ದಿ, ಉಳವೇಶ ರೇವಡಿಹಾಳ್, ರೇವಂತ್ ಮಾರಣ್ಣವರ, ಪ್ರಸಾದ್ ಹುಡೇದ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.