ADVERTISEMENT

ದುಪ್ಪಟ್ಟು ದರಕ್ಕೆ ಗುಟ್ಕಾ ಮಾರಾಟ; ರಸ್ತೆಯಲ್ಲೇ ಹೊಡೆದಾಟ, ವೈರಲ್ ಆದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 6:51 IST
Last Updated 29 ಏಪ್ರಿಲ್ 2021, 6:51 IST
ಗುಟ್ಕಾ ವಿಚಾರವಾಗಿ ರಸ್ತೆಯಲ್ಲೇ ಹೊಡೆದಾಟ
ಗುಟ್ಕಾ ವಿಚಾರವಾಗಿ ರಸ್ತೆಯಲ್ಲೇ ಹೊಡೆದಾಟ   

ಹುಬ್ಬಳ್ಳಿ: ನಗರದ ಬಾರದಾನ ಸಾಲ್ ಸಮೀಪ ಗುಟ್ಕಾವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದ ಕಾರಣದಿಂದ ಅಂಗಡಿಯ ಮಾಲೀಕ ಹಾಗೂ ಗ್ರಾಹಕರ ನಡುವೆ ಮಾತಿಗೆ ಮಾತು ಬೆಳೆದು ರಸ್ತೆಯಲ್ಲೇ ಹೊಡೆದಾಡಿಕೊಂಡ ವಿಡಿಯೊ ವೈರಲ್‌ ಆಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳಲ್ಲದ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ಹೀಗಾಗಿ ಗುಟ್ಟಾಗಿ ಗುಟ್ಕಾ ಮಾರಾಟ ಮಾಡಲಾಗುತ್ತಿತ್ತು. ನಿಗದಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ಖರೀದಿದಾರರ ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ಕೈದು ಜನ ಸೇರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ದೃಶ್ಯ ವಿಡಿಯೊದಲ್ಲಿದೆ.

ಹೊಡೆದಾಡಿಕೊಂಡ ಸಂದರ್ಭವನ್ನು ಸ್ಥಳೀಯರು ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಂಟಿಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.