ADVERTISEMENT

ಕರ್ನಾಟಕದಲ್ಲಿಗ ನಫ್ರತ್‌ ಕಾ ಅಜೆಂಡಾ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 17:04 IST
Last Updated 21 ಡಿಸೆಂಬರ್ 2025, 17:04 IST
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ   

ಧಾರವಾಡ: ರಾಹುಲ್‌ ಗಾಂಧಿ ಅವರು ‘ಮೊಹಬ್ಬತ್‌ ಕಾ ದುಖಾನ್‌’ (ಪ್ರೀತಿಯ ಅಂಗಡಿ) ಎಂದು ಸ್ಲೋಗನ್‌ ಹೇಳುತ್ತಾರೆ, ಆದರೆ ಕರ್ನಾಟಕದಲ್ಲಿ ಈಗ ‘ನಫ್ರತ್‌ ಕಾ ಅಜೆಂಡಾ’ (ದ್ವೇಷದ ಕಾರ್ಯಸೂಚಿ) ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ‘ಪ್ರೀತಿ’ ಬಿತ್ತಲು ಅವರಿಗೆ ಆಗಿಲ್ಲ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಕಾಂಗ್ರೆಸ್‌ನವರು ತಮ್ಮ ವಿರುದ್ಧ ಅಭಿಪ್ರಾಯ ಹೇಳುವವರು ಸಿಕ್ಕಿ ಹಾಕಿಸಲು ದ್ವೇಷ ಭಾಷಣ ಮಸೂದೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಕೇಂದ್ರ ಸರ್ಕಾರವು ಅಲ್ಲಿನ ಸರ್ಕಾರಕ್ಕೆ ಒತ್ತಡ ಹೇರಲಿದೆ’ ಎಂದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಂತೋಷ್ ಲಾಡ್‌ ಅವರು ಟ್ರಂಪ್‌, ಪುಟಿನ್‌ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಕ್ಷೇತ್ರದ ಕೆಲಸಗಳ ಬಗ್ಗೆ ಮಾತಾಡಲ್ಲ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.