ADVERTISEMENT

ಹೆಸ್ಕಾಂ: ಗಾಳಿ, ಮಳೆಗೆ ₹15.09 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 16:01 IST
Last Updated 2 ಜುಲೈ 2025, 16:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ಕೆಲ ದಿನಗಳಿಂದ ಗಾಳಿ ಸಹಿತ ಸುರಿದ ಮಳೆಗೆ ಹೆಸ್ಕಾಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕಂಬಗಳು, ಪರಿವರ್ತಕಗಳು ಹಾಗೂ ಲೈನ್‌ಗಳಿಗೆ ಹಾನಿಯಾಗಿದ್ದು, ಅಂದಾಜು ₹15.09 ಕೋಟಿ ನಷ್ಟವಾಗಿದೆ.

ಏಪ್ರಿಲ್‌ 1ರಿಂದ 27ರವರೆಗೆ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಹಾಗೂ ಹಾವೇರಿ ಜಿಲ್ಲೆಯಲ್ಲಿ 3,505 ವಿದ್ಯುತ್‌ ಕಂಬ, 151 ವಿದ್ಯುತ್‌ ಪರಿವರ್ತಕ, 16 ಕಿ.ಮೀ. ವಿದ್ಯುತ್‌ ಲೈನ್‌ ಹಾನಿಯಾಗಿವೆ’ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘2,794 ಕಂಬಗಳನ್ನು ಮರು ಸ್ಥಾಪಿಸಲಾಗಿದೆ. ಧಾರವಾಡ 228, ಗದಗ 36, ಹಾವೇರಿ 329, ಉತ್ತರ ಕನ್ನಡ 1,710, ಬೆಳಗಾವಿ 189, ವಿಜಯಪುರ 596, ಬಾಗಲಕೋಟೆ 417 ಕಂಬಗಳು ಉರುಳಿವೆ. 145 ಪರಿವರ್ತಕಗಳನ್ನು ಬದಲಾಯಿಸಲಾಗಿದೆ. 15 ಕಿ.ಮೀ. ವಿದ್ಯುತ್‌ ಮಾರ್ಗವನ್ನು ಮರುಸ್ಥಾಪಿಸಲಾಗಿದೆ. ಮಾರ್ಚ್‌ನಲ್ಲಿ ಅಂದಾಜು ₹2.76 ಕೋಟಿ ನಷ್ಟವಾಗಿತ್ತು ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.