ADVERTISEMENT

ಧಾರವಾಡದಲ್ಲಿ ಹೋಳಿ: ಸಂಗೀತದ ಅಬ್ಬರ, ಕುಣಿದು ಕುಪ್ಪಳಿಸಿದ ಯುವಜನರು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 8:04 IST
Last Updated 4 ಮಾರ್ಚ್ 2026, 8:04 IST
   

ಧಾರವಾಡ: ಹೋಳಿ ಹಬ್ಬದ ಅಂಗವಾಗಿ ಜನರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಗರದ ವಿವಿಧೆಡೆ ನಡೆದ ರೇನ್ ಡ್ಯಾನ್ಸ್ ನಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು.

ಎಲ್ ಐಸಿ ಕಚೇರಿ ಮುಂಭಾಗ, ಶಿವಾಜಿ ವೃತ್ತ ಸಹಿತ ವಿವಿಧೆಡೆಗಳಲ್ಲಿ ಡಿ.ಜೆ ಸಂಗೀತ ಅಬ್ಬರ ಜೋರಾಗಿತ್ತು. ಬಿರುಬಿಸಿಲಿನಲ್ಲಿ ತುಂತುರು ನೀರಿನ ಸಿಂಚನದಲ್ಲಿ ಯುವಜನರು ಸಂಭ್ರಮಿಸಿದರು. ಬಣ್ಣ ಬಳಿದುಕೊಂಡು

ಜೂಲಾ, ಮುಖವಾಡ ಧರಿಸಿ ಖುಷಿ ಪಟ್ಟರು. ಕೆಲವು ಯುವಕರು ಕೇಕೆ ಹಾಕುತ್ತಾ, ಪೀಪಿ ಉದುತ್ತಾ ದ್ವಿಚಕ್ರ ವಾಹನಗಳಲ್ಲಿ ಸಾಗಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.