ADVERTISEMENT

ಹನಿಟ್ರ್ಯಾಪ್‌ ಪುರುಷ ಪ್ರಧಾನ ಆಲೋಚನೆ: ನಟ ಚೇತನ ಅಹಿಂಸಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 19:26 IST
Last Updated 21 ಮಾರ್ಚ್ 2025, 19:26 IST
ಚೇತನ ಅಹಿಂಸಾ
ಚೇತನ ಅಹಿಂಸಾ   

ಹುಬ್ಬಳ್ಳಿ: ‘ಹನಿಟ್ರ್ಯಾಪ್‌ ಎಂಬುದು ಪುರುಷ ಪ್ರಧಾನ ಆಲೋಚನೆ. ಜನಪ್ರತಿನಿಧಿಗಳು ಒಳ್ಳೆಯ ಕೆಲಸ ಮಾಡುವುದು ಬಿಟ್ಟು, ಕೆಟ್ಟ ಕೆಲಸಕ್ಕೆ ಕೈ ಹಾಕಿದರೆ ಸಮಾಜಕ್ಕೆ ಒಳಿತಾಗುವುದಿಲ್ಲ’ ಎಂದು ನಟ ಚೇತನ ಅಹಿಂಸಾ ಹೇಳಿದರು.

‘ಒಬ್ಬ ವ್ಯಕ್ತಿಯ ಖಾಸಗಿ ವಿಷಯದ ಬಗ್ಗೆ ಜನರಿಗೆ ಆಸಕ್ತಿ ಜಾಸ್ತಿ. ಅಧಿವೇಶನದಲ್ಲಿ ಹನಿಟ್ರ್ಯಾಪ್, ಸಿ.ಡಿ, ಪೆನ್‌ಡ್ರೈವ್ ಬದಲು ಜನಪ್ರತಿನಿಧಿಗಳು, ಜನಪರ ಯೋಜನೆಗಳ ಬಗ್ಗೆ ಚರ್ಚಿಸಬೇಕು. ಹನಿಟ್ರ್ಯಾಪ್ ಎಂದರೆ ಪುರುಷರನ್ನೇ ಪುರುಷರು ಬಲಿಪಶು ಮಾಡುವುದು ಮತ್ತು ಮಹಿಳೆ ಮೇಲೆ ತಪ್ಪು ಹೊರಿಸುವುದು’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಾರ್ಚ್‌ 22ರಂದು ಕರೆ ನೀಡಿರುವ ಬಂದ್‌ ಕುರಿತು, ‘ಕೆಲ ಹೋರಾಟಗಾರರು ತಮ್ಮ ಅಸ್ತಿತ್ವದ ಉಳಿವಿಗಾಗಿ ಬಂದ್‌ ಕರೆ ನೀಡುತ್ತಾರೆ. ತ್ರಿಭಾಷಾ ಸೂತ್ರ ತೆಗೆದು, ದ್ವಿಭಾಷೆಗೆ ಹೋರಾಡಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಸಿಗಬೇಕು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.