ADVERTISEMENT

ಹುಬ್ಬಳ್ಳಿ | ಫಲಕವಿದ್ದರೂ ಮಾರ್ಗ ಮಾಹಿತಿ ಇಲ್ಲ!

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:28 IST
Last Updated 6 ಆಗಸ್ಟ್ 2025, 4:28 IST
ಹುಬ್ಬಳ್ಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿನ ಬರಹ ಸಂಪೂರ್ಣ ಅಳಿಸಿ ಹೋಗಿದೆ
ಹುಬ್ಬಳ್ಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿನ ಬರಹ ಸಂಪೂರ್ಣ ಅಳಿಸಿ ಹೋಗಿದೆ   

ಹುಬ್ಬಳ್ಳಿ: ಹುಬ್ಬಳ್ಳಿ ‘ಹೂಬಳ್ಳಿ’ ಮತ್ತು ‘ಸ್ಮಾರ್ಟ್‌ ಸಿಟಿ’ ಎಂಬ ಇನ್ನೆರಡು ಹೆಸರುಗಳಿವೆ. ಆದರೆ, ಅದಕ್ಕೆ ತಕ್ಕಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಾಣುವುದಿಲ್ಲ. ಹುಬ್ಬಳ್ಳಿಯಲ್ಲಿ ಯಾವ ದಿಕ್ಕಿನಿಂದ ಎಲ್ಲಿಗೆ ಹೋದರೆ, ಯಾವ ಊರು ಸಿಗುತ್ತದೆ ಎಂಬುದೇ ಗೊತ್ತಾಗಲ್ಲ.

ಕಾರಣ: ಇಲ್ಲಿನ ಮಾಹಿತಿ ಫಲಕಗಳು ಬಣ್ಣ ಕಳೆದುಕೊಂಡಿವೆ. ಅಕ್ಷರಗಳು ಕಾಣುವುದಿಲ್ಲ. ಊರಿಗೆ ಹೊಸದಾಗಿ ಬಂದವರು ಇಲ್ಲಿನ ದಶದಿಕ್ಕುಗಳನ್ನು ಕೇಳಿ ತಿಳಿದುಕೊಳ್ಳಲು ಹೆಣಗಾಡಬೇಕು. ಕಾಲಕಾಲಕ್ಕೆ ಮಾಹಿತಿ ಫಲಕಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಅವು ಕಬ್ಬಿಣದ ತ್ಯಾಜ್ಯವಾಗಿ ಗೋಚರಿಸುತ್ತವೆ ಹೊರತು ಯಾವ ಸ್ವರೂಪದಲ್ಲೂ ಪ್ರಯೋಜನಕಾರಿ ಅನ್ನಿಸುವುದಿಲ್ಲ. ಮಾಹಿತಿ, ಮಾರ್ಗದರ್ಶನದ ಹಿತದೃಷ್ಟಿಯಿಂದ ಫಲಕಗಳನ್ನು ಸರಿಪಡಿಸಿ ಎಂಬ ಮನವಿ ಸಾರ್ವಜನಿಕರದ್ದು.

ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ

ADVERTISEMENT
ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆ ಪ್ರವೇಶದ್ವಾರದ ಬಳಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿನ ಬರಹ ಮಾಸಿ ಹೋಗಿದ್ದು ಜಹೀರಾತು ಮಾತ್ರ ಸ್ಪಷ್ಟವಾಗಿದೆ
ಹುಬ್ಬಳ್ಳಿ ಹೊಸೂರು ವೃತ್ತದ ಬಳಿ ಅಳವಡಿಸಿದ್ದ ಡಿಜಿಟಲ್‌ ಮಾರ್ಗಸೂಚಿ ಫಲಕ ಹಾಳಾಗಿ ತಿಂಗಳುಗಳೇ ಕಳೆದಿವೆ
ಹುಬ್ಬಳ್ಳಿಯ ಹೊಸೂರು ಬಳಿಯ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿಯ ಹೆಸರು ಮಾಸಿ ಹೋಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.