ADVERTISEMENT

ಹುಬ್ಬಳ್ಳಿ: ಹೂಡಿಕೆದಾರರ ಜಾಗೃತಿ ವಿಚಾರ ಸಂಕಿರಣ ಇಂದು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:38 IST
Last Updated 9 ಜನವರಿ 2026, 7:38 IST
ಸದಾನಂದ ಪ್ಯಾಟಿ
ಸದಾನಂದ ಪ್ಯಾಟಿ   

ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಭಾಂಗಣದಲ್ಲಿ ಜನವರಿ 9ರಂದು ಸಂಜೆ 5ಕ್ಕೆ ‘ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ’ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

‘ಪ್ರಜಾವಾಣಿ’ ಹಾಗೂ ‘ಕೆನರಾ ರೊಬೆಕೊ’ ಮ್ಯೂಚುವಲ್‌ ಫಂಡ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ವಿಚಾರ ಸಂಕಿರಣದಲ್ಲಿ ಮ್ಯೂಚುವಲ್‌ ಫಂಡ್ಸ್‌, ಹಣಕಾಸಿನ ನಿರ್ವಹಣೆ ಸವಾಲು, ಮಾರುಕಟ್ಟೆ ಏರಿಳಿತ, ಯೋಜನೆ ಸೇರಿ ನಿಯಮಿತವಾದ ಹೂಡಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಆರ್ಥಿಕ ಪರಿಣತರು ಮಾಹಿತಿ ನೀಡುವರು. ಇದರೊಂದಿಗೆ ಇತ್ತೀಚಿನ ಸುಲಭ ಹೂಡಿಕೆ ವಿಧಾನ ಮತ್ತು ಹಿಂಪಡೆಯುವಿಕೆ ಆಯ್ಕೆಗಳ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು.

ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. 60ರಿಂದ 90 ನಿಮಿಷದ ಅವಧಿಯ ಉಪನ್ಯಾಸ ಕಾರ್ಯಕ್ರಮವನ್ನು ‘ಕೆನರಾ ರೊಬೆಕೊ’ ವಲಯ ಮಾರಾಟ ವಿಭಾಗದ ಮುಖ್ಯಸ್ಥ ಸದಾನಂದ ಪ್ಯಾಟಿ ನಿರ್ವಹಿಸುವರು.

ADVERTISEMENT

ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ತಮ್ಮ ಕೆವೈಸಿ ಮಾಡಿಕೊಳ್ಳಬಹುದು. ಚಹಾಕೂಟ ಮತ್ತು ನೆಟ್‌ವರ್ಕಿಂಗ್ ಸೆಷನ್‌ನಲ್ಲೂ ಪಾಲ್ಗೊಳ್ಳಬಹುದು. ಆಸಕ್ತರು ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ, ನೋಂದಣಿ ಮಾಡಿಕೊಳ್ಳಬಹುದು.

ಕಾರ್ಯಕ್ರಮ ಸ್ಥಳ: ಕೆಸಿಸಿಐ ಸಭಾಂಗಣ

ಸಮಯ: ಸಂಜೆ 5

ದೂರವಾಣಿ ಸಂಖ್ಯೆ: 9902574528.

-
ಕ್ಯೂ ಆರ್‌ ಕೋಡ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.