
ಸಿದ್ಧಾರೂಢರ ವೈಭವದ ರಥೋತ್ಸವ
ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಸ್ವಾಮಿ ವೈಭವದ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಗುರುವಾರ ನೆರವೇರಿತು.
ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸಿದ್ಧಾರೂಢ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ದೇಗುಲದಿಂದ ಮುಖ್ಯದ್ವಾರದವರೆಗೆ ರಥ ಎಳೆದು, ದೇವಸ್ಥಾನಕ್ಕೆ ವಾಪಸ್ಸಾಗುವವರೆಗೆ ಭಕ್ತರು ಸಂಭ್ರಮದಿಂದ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಸಿದ್ಧಾರೂಢ ಶ್ರೀಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಪೂಜೆ, ಅರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಡೊಳ್ಳು, ಭಜನೆ, ಸಿದ್ಧಾರೂಢರ ಕುರಿತ ಹಾಡುಗಳು ಮೆರುಗು ನೀಡಿದವು.
ವಿವಿಧ ಸಂಘ- ಸಂಸ್ಥೆಗಳು, ಭಕ್ತರಿಗೆ ಪ್ರಸಾದ, ತಂಪುಪಾನೀಯ ಹಂಚಿದವು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.