ADVERTISEMENT

ಹುಬ್ಬಳ್ಳಿ: ಸ್ಪೆಂಡ್‌ ಇಂಡಿಯಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 8:18 IST
Last Updated 13 ಜೂನ್ 2020, 8:18 IST

ಹುಬ್ಬಳ್ಳಿ: ಆರ್ಥಿಕ ಸಾಮರ್ಥ್ಯ ಉತ್ತಮವಾಗಿ ಇರುವವರು ವಸ್ತುಗಳ ಖರೀದಿಗೆ ಮುಂದಾಗುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೈಜೋಡಿಸಬೇಕು ಎಂದು ಸ್ಪೆಂಡ್‌ ಇಂಡಿಯಾದ ಕೆ.ಟಿ. ದೇಸಾಯಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡಿಕೆ ಸೃಷ್ಟಿಯಾಗದಿದ್ದರೆ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಕುಸಿಯಲಿದೆ. ಉದ್ಯೋಗವಕಾಶಗಳೂ ಕಡಿಮೆಯಾಗಲಿವೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ಕೈಲಾದಷ್ಟು ಖರೀದಿಸಿ ಬೇಡಿಕೆ ಸೃಷ್ಟಿಸಬೇಕು ಎಂದರು.

ಪೂರೈಕೆಯಷ್ಟೇ ಇದ್ದು ಬೇಡಿಕೆ ಇರದಿದ್ದರೆ, ಆರ್ಥಿಕ ಕುಸಿತ ಉಂಟಾಗುತ್ತದೆ. ಜಿಡಿಪಿ ದರ ಕಡಿಮೆಯಾಗಿ, ಉದ್ಯೋಗವಕಾಶಗಳು ಕಡಿಮೆಯಾಗುತ್ತವೆ. ದೊಡ್ಡ ಪ್ರಮಾಣದ ವಸ್ತುವನ್ನೇ ಖರೀದಿಸಬೇಕು ಎಂದಿಲ್ಲ. ಸಣ್ಣ ಮೊತ್ತದ ವಸ್ತು ಖರೀದಿಸಿದರೂ ಸಾಕು. ಬೇಡಿಕೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ADVERTISEMENT

ನಾವು ಖರೀದಿಸಿದ ವಸ್ತುಗಳೊಂದಿಗೆ ಫೋಟೊ ತೆಗೆದುಕೊಂಡು ಫೇಸ್‌ಬುಕ್‌ ನಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಜನರೂ ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮವನಿ ಮಾಡಿದರು. ಆರ್ಯ ಹಳ್ಳಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.