ಹುಬ್ಬಳ್ಳಿ: ತಮ್ಮ ಸಮಾಜದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ, ತಲ್ವಾರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೇಹುಬ್ಬಳ್ಳಿ ಹೊಸನಗರದ ಮಣಿಕಂಠ ಕೊತ್ವಾಲ್ ಹಲ್ಲೆಗೊಳಗಾದ ಯುವಕ. ನಗರದ ಮಲ್ಲಿಕಜಾನ್ ಮುದಗಲ್, ತೇಶಾ ಮುದುಗಲ್ ಸೇರಿ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರೀತಿಸುತ್ತಿದ್ದ ಯುವತಿಯನ್ನು ಕಲಘಟಗಿಗೆ ಬಿಡಲು ಹೋಗುತ್ತಿದ್ದಾಗ, ಆಟೊದಲ್ಲಿ ಬಂದ ಆರೋಪಿಗಳು ಕಾರವಾರ ರಸ್ತೆಯ ಸೇತುವೆ ಬಳಿ ಅಪಹರಿಸಿಕೊಂಡು ಹೊರವಲಯಕ್ಕೆ ಕರೆದ್ಯೊಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.