ADVERTISEMENT

ಕಲಘಟಗಿ: ₹25 ಲಕ್ಷ ಅನುದಾನದ ರಸ್ತೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:59 IST
Last Updated 18 ಫೆಬ್ರುವರಿ 2026, 6:59 IST
<div class="paragraphs"><p>ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಬೂದನಗುಡ್ಡ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯ ₹25 ಲಕ್ಷ ಅನುದಾನದ ಕಾಂಕ್ರಿಟ್ ಕಾಮಗಾರಿಗೆ ವಿವಿಧ ಗ್ರಾಮದ ಹಿರಿಯರು ಚಾಲನೆ ನೀಡಿದರು</p></div>

ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಬೂದನಗುಡ್ಡ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯ ₹25 ಲಕ್ಷ ಅನುದಾನದ ಕಾಂಕ್ರಿಟ್ ಕಾಮಗಾರಿಗೆ ವಿವಿಧ ಗ್ರಾಮದ ಹಿರಿಯರು ಚಾಲನೆ ನೀಡಿದರು

   

ಕಲಘಟಗಿ: ತಾಲ್ಲೂಕಿನ ಚಳಮಟ್ಟಿ ಗ್ರಾಮದ ಬೂದನಗುಡ್ಡ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗೆ ಮುಖ್ಯಮಂತ್ರಿ ವಿಶೇಷ ಅನುದಾನವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಂಜೂರ ಮಾಡಿಸಿ ₹25 ಲಕ್ಷ ಅನುದಾನದ ಕಾಂಕ್ರಿಟ್ ರಸ್ತೆಗೆ ಮಂಗಳವಾರ ಭೂಮಿ ಪೂಜೆ ನೆರೆವೇರಿಸಿದರು.

ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ, ಚಳಮಟ್ಟಿ ಗ್ರಾಮದ ಮಾರುತಿ ಅಮೃತನವರ, ಮಲ್ಲಯ್ಯ ಚಿಕ್ಕಮಠ, ಬಸವಂತಪ್ಪ ಸುಬಾಣವರ, ಕುರುವಿನಕೊಪ್ಪ ಗ್ರಾಮದ ಮಂಜುನಾಥ ಚಂಡುನವರ, ಕಾಡನಕೊಪ್ಪ ಗ್ರಾಮದ ಗಣೇಶ ಕುಳ್ಳೇನವರ, ಉಗ್ಗಿನಕೇರಿ ಗ್ರಾ.ಪಂ ಪಿಡಿಓ ಆರ್. ಪಿ ಪೂಜಾರ, ಗುರುಪಾದ ಉಳಾಗಡ್ಡಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.