
ಕಲಘಟಗಿ: ಜಾತ್ರೆಗೆ ಆಗಮಿಸುವ ಭಕ್ತರಿಗೆ ವೈದ್ಯಕೀಯ ಸೇವೆ, ಕುಡಿಯುವ ನೀರು, ಶೌಚಾಲಯ, ಭಕ್ತರಿಗೆ ಊಟದ ಕೌಂಟರ್ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಅಕ್ಕಿ ಓಣಿಯಲ್ಲಿ ಗ್ರಾಮ ದೇವಿಯರ ಪ್ರತಿಷ್ಠಾಪಿಸುವ ಸ್ಥಳ ಭಾನುವಾರ ಪರಿಶೀಲಿಸಿ ನಂತರ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಕರೆದು ಜಾತ್ರೆಯ ರೂಪರೇಷೆಗಳ ಬಗ್ಗೆ ಟ್ರಸ್ಟ್ ಕಮಿಟಿ, ಜಾತ್ರಾ ಉತ್ಸವ ಸಮಿತಿ, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಗ್ರಾಮದೇವಿಯರ ಜಾತ್ರೆ ಅಂಗವಾಗಿ ಈಗಾಗಲೇ ಎರಡು ಹೊರವಾರಗಳು ಮುಗಿದಿದ್ದು. ಫೆ.25 ರಿಂದ ಮಾರ್ಚ್ 5 ರವರೆಗೆ ಅದ್ದೂರಿಯಾಗಿ ನಡೆಯಲಿರುವ ಜಾತ್ರೆಗೆ ಪ್ರತಿಯೊಬ್ಬರೂ ಯಶಸ್ಸಿಗೆ ಶ್ರಮಿಸಬೇಕು ಎಂದರು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗಾಗಿ ವಿಶೇಷ ಸಾರಿಗೆ, ವಾಹನದ ದಟ್ಟಣೆ ನಿಯಂತ್ರಿಸಲು ಪಾರ್ಕಿಂಗ್ ವ್ಯವಸ್ಥೆ, ಬೀದಿ ದೀಪ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರಾ ಮಹೋತ್ಸವದ ಸಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಕಲಾವಿದರಿಗೆ, ವೈದ್ಯರಿಗೆ, ಭೂಮಿ ದಾನಿಗಳಿಗೆ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವರಿಗೆ ದೇಣಿಗೆ ನೀಡಿದ ಹಾಗೂ ವಿಶೇಷ ವ್ಯಕ್ತಿಗಳ ಗುರುತಿಸಿ ಸನ್ಮಾನಿಸಲು ತಿಳಿಸಿದರು.
ಪ್ರಭಾರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ತಹಶೀಲ್ದಾರ್ ಬಸವರಾಜ ಹೊಂಕಣದವರ, ತಾಲ್ಲೂಕು ಪಂಚಾಯಿತಿ ಇಓ ಪಿ.ವೈ.ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ.ಬಿ, ಜಾತ್ರಾ ಸಮಿತಿ ಅಧ್ಯಕ್ಷ ಶ್ರೀಕಾಂತ ಕಟಾವ್ಕರ, ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಬೋಳಾರ, ಎಸ್.ಆರ್.ಪಾಟೀಲ, ವೃಷಭೇಂದ್ರ ಪಟ್ಟಣಶೆಟ್ಟಿ, ಮಂಜುನಾಥ ಮುರಳ್ಳಿ, ರಾಕೇಶ್ ಅಳಗವಾಡಿ, ಮುಕುಂದ ಅಂಚಟಗೇರಿ, ಬಾಳು ಖಾನಾಪುರ, ವಿಜಯ ಮುರಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.