ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಂಭಾಂಗಣದಲ್ಲಿ ಸೋಮವಾರ ನಡೆದ ಸಂಸ್ಥೆಯ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025ರಿಂದ 2027ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗದಗನ ಜಿ.ಕೆ.ಆದಪ್ಪಗೌಡರ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಪ್ರವೀಣ ಅಗಡಿ, ಎಸ್.ಜಿ.ಕಮ್ಮಾರ, ವೀರಣ್ಣ ಕಲ್ಲೂರ (ಉಪಾಧ್ಯಕ್ಷರು), ಉದಯ ರೇವಣಕರ (ಗೌರವ ಕಾರ್ಯದರ್ಶಿ), ಪ್ರಕಾಶ ಶೃಂಗೇರಿ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ಷೇತ್ರದಿಂದ ಸದಸ್ಯರಾಗಿ ಕಾಂತಿಲಾಲ ಪುರೋಹಿತ, ಅಶೋಕ ಎನ್. ಲದವಾ, ಗಂಗನಗೌಡ ಎಸ್. ಪಾಟೀಲ, ಗಿರಿಧರಲಾಲ ಬಾಫ್ನಾ, ಶಶಿಧರ ಶೆಟ್ಟರ್, ನೀಲಕಂಠಪ್ಪ ಎಸ್. ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟಿ, ಮಲ್ಲಿಕಾರ್ಜುನ ಎ.ಕಂಬಳ್ಯಾಳ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿದ ಕ್ಷೇತ್ರದಿಂದ ಮುರುಘರಾಜೇಂದ್ರ ಬಿ.ಬಡ್ನಿ–ಗದಗ, ಮಂಜುನಾಥ ಹೆಗಡೆ–ಹೊನ್ನಾವರ, ಬಸವರಾಜ ಎಸ್.ಜವಳಿ–ಬೆಳಗಾವಿ, ರಾಜಶೇಖರ ಎಸ್.ಮಾಗನೂರ–ಬ್ಯಾಡಗಿ, ಗುರುಸಿದ್ದೇಶ ಎಚ್.ಕೋತಂಬ್ರಿ–ಹೊಸಪೇಟೆ ಮತ್ತು ರವಿ ಬಿ. ಕುಮತಗಿ–ಬಾಗಲಕೋಟ ಅವರು ಆಯ್ಕೆಯಾದರು.
ನೂತನ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಮಾತನಾಡಿ, ‘ಎಲ್ಲರ ಸಹಕಾರದಿಂದ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಸನ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಎಂ.ಸಿ.ಹಿರೇಮಠ, ವಿ.ಪಿ. ಲಿಂಗನಗೌಡರ, ರಮೇಶ ಎ.ಪಾಟೀಲ, ವಿನಯ ಜೆ. ಜವಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.