ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ಗುರು ಮಡಿವಾಳ ಶಿವಯೋಗಿಯ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವ ಫೆ. 8 ರಿಂದ 15ರವರೆಗೆ ಜರುಗಲಿದೆ.
ಫೆ.8ರಂದು ಬೆಳಿಗ್ಗೆ ಮಡಿವಾಳ ಶಿವಯೋಗಿಯ ಕರ್ತೃ ಗದ್ದುಗೆಗೆ ಮಂಗಳಗಟ್ಟಿಯ ಅರ್ಚಕ ಎಂ.ಐ.ಪೂಜಾರ ಅವರಿಂದ ನಿತ್ಯ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮದ ಸಪ್ತಾಹ ಆರಂಭ. 9ಕ್ಕೆ ಬೈಲಹೊಂಗಲದ ಮಡಿವಾಳ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಷಟ್ ಸ್ಥಲ ಧ್ವಜಾರೋಹಣ. ಪ್ರತಿದಿನ ಮಹಾಪ್ರಸಾದ ವ್ಯವಸ್ಥೆ ಇರಲಿದೆ.
ಫೆ.9, 10 ಹಾಗೂ 11ರ ಸಂಜೆ 7ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಫೆ.12ರಿಂದ ಫೆ.13ರ ಸಂಜೆ 6ಕ್ಕೆ ತಪೋತಾಣ ಪುಣ್ಯಾರಣ್ಯ ಪ್ರತಿವನಮಠದ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಧಾರವಾಡ ಸರೋವರ ನಗರದ ಚಂದ್ರಶೇಖರ ಸ್ವಾಮೀಜಿ ಹಾಗೂ ಕೆಲಗೇರಿಯ ಶ್ರೀಶೈಲ ಸಾಣಿಕೊಪ್ಪ ಅವರಿಂದ ಪ್ರವಚನ ಹಾಗೂ ಕೀರ್ತನೆ ಜರುಗಲಿದೆ.
ಫೆ.11 ಮತ್ತು 12ರಂದು ಸಾಮೂಹಿಕ ವಿವಾಹ ಹಾಗೂ ರಾಚೋಟೇಶ್ವರ ಶಿವಾಚಾರ್ಯರಿಂದ ಶಿವದೀಕ್ಷೆ(ಅಯ್ಯಾಚಾರ) ಜರುಗಲಿದ್ದು, ಮುಂಚಿತವಾಗಿ ದೇವಸ್ಥಾನದ ಕಮೀಟಿ ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.
ಫೆ.12ರಂದು ಕುಮಾರೇಶ್ವರ ಮಠದಿಂದ ಪೇಟೆ ಓಣಿಯ ಮೂಲಕ ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ನಂತರ ರಥೋತ್ಸವಕ್ಕೆ ಕಳಸಾರೋಹಣ. ಫೆ.15ರಂದು ಸಂಜೆ ನಾಡಿನ ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಜರುಗುವುದು.
ಫೆ.16, 17,18ರಂದು ಬಯಲು ಕುಸ್ತಿ. ಫೆ.19ರಂದು ಲಿಂ.ಚನ್ನಬಸವ ಸ್ವಾಮೀಜಿಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಂತರ 11 ಗಂಟೆಗೆ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.