
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಭಾಗವಹಿಸಿದರು
ಹುಬ್ಬಳ್ಳಿ: ‘ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಗಿಡಮರಗಳನ್ನು ಬೆಳೆಸಿ ಸೌಂದರೀಕರಣ ಮಾಡುವುದು ನಮ್ಮ ಉದ್ದೇಶ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಿಕೆಯ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಎಪಿಎಂಸಿ ಸದಸ್ಯ ರಾಜಕಿರಣ ಮೆಣಸಿನಕಾಯಿ, ಚನ್ನು ಹೊಸಮನಿ, ಯುವ ಮೋರ್ಚಾ ಅಧ್ಯಕ್ಷ ಮುತ್ತು ಹೆಬ್ಬಳ್ಳಿ, ಅಶೋಕ್ ವಾಲ್ಮೀಕಿ, ರಾಮನಗೌಡ ಶೆಟ್ಟನಗೌಡ್ರ, ಮಂಜುನಾಥ್ ಊಟವಾಲೆ, ಸಂತೋಷ, ಸಿದ್ದರಾಮ ಅಂಗಡಿ, ರವಿ ಅಥರ್ವಲೆ, ರಾಜೇಶ್ ಸಾಬ್ ನದಾಫ್, ಮಂಜುನಾಥ್ ಅಥರ್ವಲೆ, ಪ್ರಸನ್ನ ಕಿಲ್ಲೆದಾರ್, ಅರ್ಜುನ್, ಸಾಯಿ ಕಿರಣ್, ಗಣೇಶ ಗಣಮುಖಿ, ರೋಹಿತ್ ಪಟೇಲ, ಪಂಚಯ್ಯ ಪಂಚಾಕ್ಷರಿ ಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.