ಕಲಘಟಗಿ: ಮಲಪ್ರಭಾ ನದಿ ನೀರನ್ನು ಶುದ್ಧೀಕರಿಸಿ ಮನೆ ಮನೆಗೆ ಪೂರೈಸಲಾಗುತ್ತದೆ ಎಂದು ಶಾಸಕ ಸಿ. ಎಂ ನಿಂಬಣ್ಣವರ ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತಾಡಿದರು. ಇಲ್ಲಿಯವರೆಗೆ ಎಲ್ಲರಿಗೂ ವಿವಿಧ ಕೊಳವೆ ಬಾವಿ ನೀರು ಪೂರೈಕೆಯಾಗುತ್ತಿದ್ದು, ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಸರ್ಕಾರ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸುತ್ತಿದೆ ತಂದಿದೆ ಎಂದರು.
ತಾಲ್ಲೂಕಿನ ಇಚನಳ್ಳಿ ತಾಂಡೆ, ತಂಬೂರ, ಸಂಗಟಿಕೊಪ್ಪ, ಹುಲಗಿನಕೊಪ್ಪ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿದರು. ಪಂಚಾಯತ್ ರಾಜ್ ಇಲಾಖೆ ಸಹಾಯಕ ಎಂಜಿನಿಯರ್ ವಿಜಕುಮಾರ ಹಿಂದಿನಮನಿ, ತಂಬೂರ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ಬಾವಕರ, ಯಲ್ಲಪ್ಪ ಚೌರಗಿ, ಸೋಮು ಕೊಪ್ಪದ, ಹನುಮಂತ ಸರಾವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.