ಹುಬ್ಬಳ್ಳಿ: ‘ತೆಲಂಗಾಣದ ವಾರಂಗಲ್‌ನಲ್ಲಿ 2012ರಲ್ಲಿ ಆರಂಭವಾದ ಮಾಂಗಳ್ಯ ಶಾಪಿಂಗ್ ಮಾಲ್ ತನ್ನ ವಹಿವಾಟನ್ನು ವಿಸ್ತರಿಸುತ್ತ ಇದೀಗ ಹುಬ್ಬಳ್ಳಿಯಲ್ಲಿ ನೂತನ ಮಳಿಗೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಬೆಳಗಾವಿಯಲ್ಲಿಯೂ ಶಾಖೆ ಆರಂಭಗೊಳ್ಳಲಿದೆ’ ಎಂದು ಮಾಲ್‌ನ ನಿರ್ದೇಶಕ ಕಾಸಂ ನಮಃಶಿವಾಯ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಂಡ ಮಾಲ್‌ನ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.
‘ಮಾಲ್‌ನಲ್ಲಿ ಮಹಿಳೆಯರು, ಪುರುಷರು, ಯುವಜನರು ಹಾಗೂ ಮಕ್ಕಳ ಅಭಿರುಚಿಗೆ ತಕ್ಕಂತೆ ಆಧುನಿಕ ವಸ್ತ್ರ ಸಂಗ್ರಹ, ಮದುವೆ ಮತ್ತು ಶುಭಕಾರ್ಯಗಳಿಗೆ ವಿಶೇಷ ಸಂಗ್ರಹ ಇದೆ. ಸ್ಥಳೀಯ 250 ಜನರಿಗೆ ಉದ್ಯೋಗ ನೀಡಿದ್ದು, ಒಟ್ಟಾರೆ 10 ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ’ ಎಂದರು.
ಮಳಿಗೆ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ್, ‘ಶಾಂಪಿಗ್ ಪ್ರಿಯರಿಗೆ ‘ಮಾಂಗಳ್ಯ’ ಹೇಳಿ ಮಾಡಿಸಿದಂತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಬಟ್ಟೆಗಳು ಲಭ್ಯವಿವೆ’ ಎಂದರು. ಬಳಿಕ, ಮಳಿಗೆಯನ್ನು ವೀಕ್ಷಿಸಿ, ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.
‘ಹುಬ್ಬಳ್ಳಿಯ ಜನತೆ ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ಬಟ್ಟೆ– ಆಭರಣ ಖರೀದಿಗೆ ವಿಶೇಷ ಸಂದರ್ಭ ಬೇಕಿಲ್ಲ. ಹೀಗಾಗಿ ಜನರು ಮಾಂಗಳ್ಯ ಶಾಪಿಂಗ್ ಮಳಿಗೆಗೆ ಭೇಟಿ ನೀಡಬೇಕು’ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಉದ್ಯಮಿ ವಸಂತ ಲದ್ವಾ, ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಮಾಲ್‌ನ ನಿರ್ದೇಶಕರಾದ ಪುಲ್ಲೂರು ನರಸಿಂಹಮೂರ್ತಿ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ್, ಕಾಸಂ ಶಿವಪ್ರಸಾದ್, ಪುಲ್ಲೂರು ಅರುಣ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.