ADVERTISEMENT

ಹುಬ್ಬಳ್ಳಿ: ಫೆ.18ಕ್ಕೆ ಸಾಮೂಹಿಕ ವಿವಾಹ, ಉಪನಯನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 15:37 IST
Last Updated 22 ಡಿಸೆಂಬರ್ 2023, 15:37 IST

ಹುಬ್ಬಳ್ಳಿ: ನಗರದ ನವಯುಗ ಸಂಘಟನೆ ವತಿಯಿಂದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವು ಮುಂಬರುವ ಫೆ.18ರಂದು ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ ಎದುರಿನ ಸಂತೇ ಮೈದಾನದಲ್ಲಿ ನಡೆಯಲಿದೆ.

ವರನಿಗೆ 21, ವಧುವಿಗೆ 18 ವರ್ಷ ತುಂಬಿರಬೇಕು. ವಧುವಿಗೆ ತಾಳಿ, ಕಾಲುಂಗುರು, ಸೀರೆ, ರವಿಕೆ ಹಾಗೂ ವರನಿಗೆ ಅಂಗಿ, ಪೈಜಾಮ್‌, ಬಾಸಿಂಗ್‌ ಮದುವೆ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊ.9444250081, 7975155581 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT