
ಧಾರವಾಡ: 'ಅವತಾರ ಮೆಹರಬಾಬಾ ಅವರು ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು. ಜೀವನದುದ್ದಕ್ಕೂ ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವನ ಸಾಗಿಸಿದರು’ ಎಂದು ಸಾಹಿತಿ ಲಕ್ಷ್ಮೀಕಾಂತ ಇಟ್ನಾಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಈಚೆಗೆ ಆಯೋಜಿಸಿದ್ದ ಅವತಾರ ಮೆಹೆರಬಾಬಾ ದತ್ತಿ ಉಪನ್ಯಾಸದಲ್ಲಿ `ಅವತಾರ ಮೆಹೆರಬಾಬಾ ಅವರ ಆಧ್ಯಾತ್ಮಿಕ ಜೀವನ ಹಾಗೂ ಸಾಮಾಜಿಕ ಕೊಡುಗೆ' ಕುರಿತು ಮಾತನಾಡಿ, ಮೆರಬಾಬಾ ಅವರು ಪ್ರಶ್ನಿಸುವ ಗುಣ ಬೆಳೆಸಿಕೊಂಡಿದ್ದರು. ಅವರಿಗೆ ಅಪಾರ ಶಿಷ್ಯರು ಇದ್ದರು’ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ‘ಅಸಮಾನತೆ ತೊಲಗಬೇಕು. ನಾವೆಲ್ಲ ಒಂದು ಎಂಬ ಭಾವನೆ ಮೂಡಬೇಕು‘ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಯು.ಎಸ್.ಕುನ್ನಿಭಾವಿ, ಲತೀಫ್ ಎಸ್.ಕೆ, ವಿಶ್ವೇಶ್ವರಿ ಹಿರೇಮಠ, ಶಂಕರ ಕುಂಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.