ADVERTISEMENT

ದರ್ಗಾ ತೆರವು | ಹಿಂದೂ-ಮುಸ್ಲಿಂ ಮಧ್ಯೆ ಜಗಳ ಹಚ್ಚುವ ಹುನ್ನಾರ: ಶಾಸಕ ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 5:24 IST
Last Updated 21 ಡಿಸೆಂಬರ್ 2022, 5:24 IST
 ಶಾಸಕ ಪ್ರಸಾದ ಅಬ್ಬಯ್ಯ
ಶಾಸಕ ಪ್ರಸಾದ ಅಬ್ಬಯ್ಯ    

ಹುಬ್ಬಳ್ಳಿ:'ಇಲ್ಲಿನ ಬೈರಿದೇವರಕೊಪ್ಪದ ಬಳಿಯಿರುವ ದರ್ಗಾ ತೆರವು ಹಿಂದೆ ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಹುನ್ನಾರ ಅಡಗಿದೆ' ಎಂದು‌ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಇಲ್ಲಿರುವ ದರ್ಗಾದಿಂದ ವಾಹನಗಳ ಸಂಚಾರಕ್ಕಾಗಲಿ, ಸಾರ್ವಜನಿಕರ ಓಡಾಟಕ್ಕಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ರಾಜಕೀಯ ಪ್ರೇರಿತವಾಗಿ, ಚುನಾವಣೆ ಹಿನ್ನೆಲೆಯಲ್ಲಿ ತೆರವು ಮಾಡಲಾಗುತ್ತಿದೆ. ಉಣಕಲ್ ಸಿದ್ದಪ್ಪಜ್ಜನ ಗುಡಿ ಎದುರು ಪ್ಲೈಓವರ್ ನಿರ್ಮಿಸಿದಂತೆ, ಇಲ್ಲಿಯೂ ನಿರ್ಮಿಸಿ ದರ್ಗಾ ಉಳಿಸಬಹುದಿತ್ತು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾವ ಮಾಡುತ್ತೇನೆ' ಎಂದರು.

'ಮಸೀದಿ, ಗುಡಿಗಳನ್ನು ತೆರವು ಮಾಡಿದ್ದರೆ ನಮ್ಮಿಂದ ಯಾವ ತಕರಾರು ಇರಲಿಲ್ಲ. ಅಲ್ಲಿರುವುದು ದರ್ಗಾ. ಧರ್ಮದ ಗುರುವನ್ನು ಜೀವಂತ ಸಮಾಧಿ ಮಾಡಿರುವ ಸ್ಥಳ. ಹಾಗೆಲ್ಲ ತೆರವು ಮಾಡಬಾರದು. ಇದು ರಾಜಕೀಯ ಹುನ್ನಾರ ಎನ್ನುವುದು ಜನರಿಗೆ ಅರಿವಾಗುತ್ತಿದೆ. ಸಂಬಂಧಿಸಿದ ವ್ಯಕ್ತಿಗಳು‌ ಮುಂದಿನ ದಿನಗಳಲ್ಲಿ ಅದರ ಫಲ ಅನುಭವಿಸುತ್ತಾರೆ' ಎಂದು ಹೇಳಿದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.