ADVERTISEMENT

ಕಲಘಟಗಿ: ಮಂಗನ ಹಿಡಿಯಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 3:03 IST
Last Updated 5 ಫೆಬ್ರುವರಿ 2026, 3:03 IST
ಕಲಘಟಗಿ ಪಟ್ಟಣದ ವಿದ್ಯಾಗಿರಿಯಲ್ಲಿ ಮಂಗನ ಹಿಡಿಯುವ ಕಾರ್ಯಚರಣೆ ನಡೆಯಿತು
ಕಲಘಟಗಿ ಪಟ್ಟಣದ ವಿದ್ಯಾಗಿರಿಯಲ್ಲಿ ಮಂಗನ ಹಿಡಿಯುವ ಕಾರ್ಯಚರಣೆ ನಡೆಯಿತು   

ಕಲಘಟಗಿ: ಪಟ್ಟಣದ ವಿದ್ಯಾಗಿರಿ ರಸ್ತೆಯಲ್ಲಿ ಮಂಗವೊಂದು ನಾಲ್ಕು ದಿನಗಳಿಂದ ಕೆಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಅದನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಜ್ಞರು ಹರಸಾಹಸ ಪಡುತ್ತಿದ್ದಾರೆ.

ಕೆಲವು ಮಹಿಳೆಯರಿಗೆ ಮಂಗವು ಕೈ, ಕಾಲುಗಳಿಗೆ ಗಾಯಗೊಳಿಸಿದೆ. ಮನೆಯ ಒಳಗೂ ನುಗ್ಗುವುದರಿಂದ ಭಯದ ವಾತಾವರಣ ಉಂಟಾಗಿದೆ.

ಪಟ್ಟಣದ ಖಾನಹೊಂಡ, ಪಾಲ್ಕಾರಚಾಳ, ಜನತಾ ಇಂಗ್ಲಿಷ್ ಸ್ಕೂಲ್, ಮಾರುಕಟ್ಟೆ ಸೇರಿದಂತೆ ವಿವಿಧ ಕಡೆ ಮಂಗ ಓಡಾಡುತ್ತಿರುವುದರಿಂದ ಸೆರೆ ಹಿಡಿಯುವುದು ಕಷ್ಟವಾಗಿದೆ.

ADVERTISEMENT

‘ಮಂಗನ ಹಿಡಿಯುವವರನ್ನು ಕರೆಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಚಾರಣೆ ಮಾಡಿದರೂ ಸಿಕ್ಕಿಲ್ಲ. ಅರಣ್ಯ ಇಲಾಖೆಯವರು ನಮ್ಮಲ್ಲಿ ಮಂಗ ಹಿಡಿಯುವ ಸಿಬ್ಬಂದಿ ಇಲ್ಲ ಎನ್ನುತ್ತಾರೆ. ಇನ್ನೊಮ್ಮೆ ಮಂಗ ಹಿಡಿಯುವವರ ಕರೆಯಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹೇಳಿದರು.

ಕಲಘಟಗಿ ಪಟ್ಟಣದಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಮಂಗ ಕುಳಿತಿದ್ದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.