ADVERTISEMENT

ಉಪ್ಪಿನಬೆಟಗೇರಿ | ಭಾವೈಕ್ಯದ ಮೊಹರಂ: ಸಿದ್ದತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:01 IST
Last Updated 6 ಜುಲೈ 2025, 5:01 IST
<div class="paragraphs"><p>ಉಪ್ಪಿನಬೆಟಗೇರಿ ಗ್ರಾಮದ ಸಸಿ (ಆಲಿಮ್ ಫೀರಾ) ಮಸೂತಿಯಲ್ಲಿ ಪ್ರತಿಷ್ಥಾಪಿಸಿದ್ದ ಐತಿಹಾಸಿಕ ಸಸಿ ಡೋಲಿ (ಸಂಗ್ರಹ ಚಿತ್ರ)&nbsp;</p></div>

ಉಪ್ಪಿನಬೆಟಗೇರಿ ಗ್ರಾಮದ ಸಸಿ (ಆಲಿಮ್ ಫೀರಾ) ಮಸೂತಿಯಲ್ಲಿ ಪ್ರತಿಷ್ಥಾಪಿಸಿದ್ದ ಐತಿಹಾಸಿಕ ಸಸಿ ಡೋಲಿ (ಸಂಗ್ರಹ ಚಿತ್ರ) 

   

ಉಪ್ಪಿನಬೆಟಗೇರಿ: ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಸಮುದಾಯದವರು ಜುಲೈ 6ರಂದು ಗ್ರಾಮದಲ್ಲಿ ಭಕ್ತಿಯಿಂದ ಆಚರಿಸುವರು. 

ಉಪ್ಪಿನಬೆಟಗೇರಿ ಮತ್ತು ವಿಜಯಪುರದಲ್ಲಿ ಎರಡು ಸಸಿ ಡೋಲಿ ತಯಾರಿಸುತ್ತಾರೆ. ವಿಜಯಪುರದಲ್ಲಿ ಮಣ್ಣಿನ ಲೇಪನದಲ್ಲಿ ಬೀಜ ನೆಟ್ಟು ಸಸಿ ಬೆಳೆಸಿದರೆ, ಉಪ್ಪಿನಬೆಟಗೇರಿಯ ಹಳೆ ಬಸ್ ನಿಲ್ಧಾಣದ ಹತ್ತಿರವಿರುವ ಸಸಿ (ಅಲಿಮ್ ಫೀರಾ) ಮಸೂತಿಯಲ್ಲಿ ಮೊಹರಂ ಚಂದ್ರದರ್ಶನ ನಂತರ ಮಡಿ– ಹುಡಿಯಿಂದ ಬಿದಿರಿನಲ್ಲಿ ತಯಾರಿಸಿದ ಡೋಲಿಯ ಮೇಲೆ ಜೈದರ್ ಹತ್ತಿ ಲೇಪನ ಮಾಡಿ ಸಸಿಗಳನ್ನು ಬೆಳೆಸುವುದು ಇಲ್ಲಿನ ವಿಶೇಷವಾಗಿದೆ. 

ADVERTISEMENT

ವಿಜಯಪುರದಿಂದ ಉಪ್ಪಿನಬೆಟಗೇರಿಗೆ ವಲಸೆ ಬಂದಿದ್ದ ಅನ್ಸಾರಿ ಸಾಹೇಬ ಇಲ್ಲಿನ ವಿಜಾಪುರ ಕುಟುಂಬ ಮನೆಯ ಹತ್ತಿರ ಮಸೂತಿ ನಿರ್ಮಿಸಿ ಅದರಲ್ಲಿ ಸಸಿ ಡೋಲಿ ಪ್ರತಿಷ್ಥಾಪನೆಗೆ ಚಾಲನೆ ನೀಡಿದರು ಎಂಬ ಐತಿಹ್ಯವಿದೆ.

ಈ ಡೋಲಿಯಲ್ಲಿ ಸಸಿಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೋ ಅದೇ ತೆರನಾಗಿ ಬೆಳೆಗಳು ಬೆಳೆಯುತ್ತದೆ ಎಂಬುದು ಇಲ್ಲಿನ ನಂಬಿಕೆ ಎನ್ನುತ್ತಾರೆ ಗ್ರಾಮದ ಹಿರಿಯರು.

’ಅಲಾಹಿ ದೇವರು ಹೊಳೆಗೆ ಹೋಗುವ ದಿನ ಸಸಿ ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಮೂರನೇ ದಿನಕ್ಕೆ ಹೊಳೆ ದಡದಲ್ಲಿ ಮುಚ್ಚಿ ಬಂದು ಪ್ರಸಾದ ವಿತರಣೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಸಸಿ ಮಸೂತಿಯ ಮುಜಾವರ ಬುಡ್ಡೇಸಾಬ ಜಾಲೇಗಾರ.

ಸಸಿ (ಆಲಿಮ್ ಫೀರಾ) ಮಸೂತಿಯಲ್ಲಿ ತಯಾರಿಸುವ ಸಸಿ ಡೋಲಿಯನ್ನು ನೋಡಲು ಹಲವೆಡೆಯಿಂದ ಜನರು ಬರುತ್ತಾರೆ. ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಳ್ಳುತ್ತಾರೆ
ಬಶೀರ ಅಹ್ಮದ ಮಾಳಗಿಮನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪ್ಪಿನಬೆಟಗೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.