
ನವಲಗುಂದ: ‘ವಿದ್ಯಾರ್ಥಿಗಳ ಜೀವನ ಸ್ಪರ್ಧಾತ್ಮಕತೆಯೊಂದಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಹೊಸತನದ ಶಿಕ್ಷಣದ ಜೊತೆಗೆ ಅವರಲ್ಲಿ ರಾಷ್ಟ್ರಭಕ್ತಿ ತುಂಬಿ ಸಿದ್ಧಗೊಳಿಸಬೇಕಾಗಿದೆ‘ ಎಂದು – ಹೇಳಿದರು.
ಸ್ಥಳೀಯ ವಿಶ್ವವಿಜೇತ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಲೆ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರೊಂದಿಗೆ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಸುಹಾಸ ಆನೇಗುಂದಿ ಮಾತನಾಡಿ, ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ, ಗುರು ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸುವಲ್ಲಿ ಈ ಶಾಲೆಯ ಕೊಡುಗೆ ಗಮನಾರ್ಹವಾಗಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸೆನಟ್ ಸದಸ್ಯ ಜಯಪ್ರಕಾಶ ಬಾದಾಮಿ ಹಾಗೂ ವೈದ್ಯ ಬಿ.ಎಲ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾರತೀಯ ಪರಂಪರೆಯ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತಹ ವಾತಾವರಣ ಈ ಶಾಲೆಯಲ್ಲಿದೆ ಎಂದರು.
ಆನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುರಸಭೆಯ ಮಾಜಿ ಸದಸ್ಯ ನಿಂಗಪ್ಪ ಸುಳ್ಳದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ನಾಗಪ್ಪ ತೋಟಪ್ಪನವರ, ಸ್ವಪ್ನಾ ಸರ್ವದೆ, ಮಂಜುಳಾ ಕೊಟಗಿ, ನಿಂಗಪ್ಪ ಕುಂಬಾರ, ಶಿವಲೀಲಾ ತೋಟಪ್ಪನವರ ಹಾಗೂ ಶಾಲಾ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.