ADVERTISEMENT

ಇನ್‌ಸ್ಟಾಗ್ರಾಂನಲ್ಲಿ ನೇಹಾ–ಫಯಾಜ್‌ ಫೋಟೊ ಪೋಸ್ಟ್‌: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 0:03 IST
Last Updated 22 ಏಪ್ರಿಲ್ 2024, 0:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧಾರವಾಡ: ಕೊಲೆಯಾದ ನೇಹಾ ಮತ್ತು ಫಯಾಜ್‌ ಫೋಟೊ, ‘ನೇಹಾ–ಫಯಾಜ್‌ ಟ್ರೂ ಲವ್‌ ಜಸ್ಟಿಸ್‌ ಫಾರ್‌ ತರ್‌ ಲವ್‌’ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಪ್ರಕರಣದಲ್ಲಿ ನಗರದ ಗೌಳಿಗಲ್ಲಿಯ ಸಾಧಿಕ್‌ ಇಮಾಮ್‌ಸಾಬ್‌ ತಡಕೊಡ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ.

ನೇಹಾ ಮತ್ತು ಫಯಾಜ್‌ ಫೋಟೊ, ‘ನೇಹಾ–ಫಯಾಜ್‌ ಟ್ರೂ ಲವ್‌ ಜಸ್ಟಿಸ್‌ ಫಾರ್‌ ಲವ್‌’ ಸಂದೇಶವನ್ನು ಸಾಧಿಕ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿಕೊಂಡಿರುವುದಾಗಿ ಗುರುಶಾಂತಯ್ಯ ಹಿರೇಮಠ ಅವರು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.