ADVERTISEMENT

ಧಾರವಾಡ | ಹೊಲಕ್ಕೆ ತೆರಳಲು ರಸ್ತೆಗಳೇ ಇಲ್ಲ: ಬಿತ್ತನೆಗೆ ರೈತರ ಹರಸಾಹಸ

ಕೆಸರು ತುಂಬಿ ಹಾಳಾದ ಬಂಡಿ ದಾರಿಗಳು

ವಾಸುದೇವ ಮುರಗಿ
Published 30 ಜೂನ್ 2025, 5:18 IST
Last Updated 30 ಜೂನ್ 2025, 5:18 IST
ಗುಡಗೇರಿ-ವಲಂಕಟ್ಟಿ ರಸ್ತೆಯ ಕೆಸರಿನಿಂದ ತುಂಬಿ ಗದ್ದೆಯಂತಾಗಿದ್ದು, ಇದರಲ್ಲಿಯೇ ರೈತರು ನಿತ್ಯ ಸಾಗುವಂತೆ ಆಗಿದೆ
ಗುಡಗೇರಿ-ವಲಂಕಟ್ಟಿ ರಸ್ತೆಯ ಕೆಸರಿನಿಂದ ತುಂಬಿ ಗದ್ದೆಯಂತಾಗಿದ್ದು, ಇದರಲ್ಲಿಯೇ ರೈತರು ನಿತ್ಯ ಸಾಗುವಂತೆ ಆಗಿದೆ   

ಗುಡಗೇರಿ: ಮಳೆಗಾಲ ಆರಂಭಗೊಂಡರೆ ರೈತರಿಗೆ ಒಂದೆಡೆ ಹರ್ಷ, ಇನ್ನೊಂದೆಡೆ ಪರದಾಟ. ಇದು ಪ್ರತಿ ಮಳೆಯಾಗದಲ್ಲಿಯೂ ಇದೇ ಗೋಳು.

ಬಹುತೇಕ ರೈತಾಪಿ ಜನರೇ ಇರುವ ಹೋಬಳಿಯಲ್ಲಿ ಕೃಷಿ ಭೂಮಿಯೂ ಅಪಾರ. ಮಳೆಗಾಗಿ ಕಾಯ್ದು ಜಮೀನುಗಳಲ್ಲಿ ಬಿತ್ತನೆ ಮಾಡಬೇಕು ಎಂದರೆ ಸರಿಯಾದ ದಾರಿಗಳೇ ಇಲ್ಲ.

ಗುಡಗೇರಿ- ವಲಂಕಟ್ಟಿ ರಸ್ತೆಯ ಸ್ಥಿತಿ ಒಮ್ಮೆ ನೋಡಿದರೆ ಸಾಕು ಇದರಲ್ಲಿ ಹೇಗೆ ಸಂಚರಿಸುವುದು ಎಂಬ ಪ್ರಶ್ನೆ ಮೂಡುತ್ತದೆ. ಈ ಭಾಗದ ನೂರಾರು ರೈತರು ಪ್ರತಿ ವರ್ಷವೂ ಈ ರಸ್ತೆಯಲ್ಲಿ ಸರ್ಕಸ್ ಮಾಡುತ್ತಲೇ ತಮ್ಮ ತಮ್ಮ ಹೊಲಗಳಿಗೆ ಹೋಗುವಂತಾಗಿದೆ.

ADVERTISEMENT

ಸುಮಾರು 3-4 ಕಿ.ಮೀ. ದೂರವಿರುವ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಇಲ್ಲಿನ ರೖತರು ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ರಸ ಗೊಬ್ಬರ, ಬಿತ್ತುವ ಬೀಜಗಳನ್ನು ಚಕ್ಕಡಿಯಲ್ಲಿ ಕೊಂಡುಯುತ್ತಿರುವಾಗ ಎತ್ತುಗಳು ಕೆಸರಿನ ಮಧ್ಯೆ ಸಾಗಿ ಹೋಗುವಂತಾಗಿದ್ದು ಮೂಕ ಪ್ರಾಣಿಗಳ ವೇದನೆ ದೇವರೇ ಬಲ್ಲ.

‘ಸುಮಾರು ಒಂದು ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಿದ್ದು ಅದು ಸಹ ಇಗ ಹಾಳಾಗಿದೆ. ಮುಂದಿನ ಎರಡು ಮೂರು ಕೀಲೊ ಮೀಟರ್‌ ರಸ್ತೆ ಸ್ಥಿತಿ ಹೇಳತಿರದಾಗೈತ್ರಿ, ಎತ್ತುಗಳನ್ನು ಹೂಡಿಕೊಂಡು ಹರಸಾಹಸ ಮಾಡಿ ಹೋಗಬೇಕು. ದಾರಿ ಮಧ್ಯೆ ಕೆಸರಿನಲ್ಲಿ ಸಿಲುಕಿದರೆ ರಕ್ಷಣೆಗೆ ಒಮ್ಮೆಮ್ಮೊ ಯಾರು ಇರುವುದಿಲ್ಲ. ಇದರಿಂದ ವ್ಯವಸಾಯ ಮಾಡುವುದೇ ಸಂಕಷ್ಟ ತಂದಿದೆ’ ಎಂದು ರೈತ ರೖತ ಸುರೇಶಗೌಡ ತಿಮ್ಮನಗೌಡ್ರ ಗೋಳು ತೋಡಿಕೊಂಡರು.

ರೈತರು ಸಂಪರ್ಕಿಸುವ ಹೊಲಗಳ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಇನ್ನು ಇಂತಹ ರಸ್ತೆಗಳಿಗೆ ಮುಕ್ತಿ ದೊರೆಯದೇ ರೈತರು ಮಳೆಗಾಲದಲ್ಲಿ ಕೆಸರಿನ ಮಧ್ಯೆ ಸಾಗಿ ವ್ಯವಸಾಯ ಮಾಡುವಂತೆಯಾಗಿದೆ. ಸ್ಥಳೀಯ ಪಂಚಾಯಿತಿಯಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುವುದೇ ಇಲ್ಲ ಎಂಬುವುದು ರೈತರ ಆಕ್ರೋಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.