ADVERTISEMENT

ರೈತರ ಸಾಲ ಮನ್ನಾ ವಿರೋಧಿಸಿಲ್ಲ: ನಿಜಗುಣಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 13:36 IST
Last Updated 26 ಜೂನ್ 2018, 13:36 IST

ಹುಬ್ಬಳ್ಳಿ:‘ರೈತರ ಸಾಲ ಮನ್ನಾ ಮಾಡಬಾರದು ಎಂದು ನಾನು ಎಲ್ಲಿಯೂ ಹೇಳಿಲ್ಲ’ ಎಂದು ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಸ್ಪಷ್ಟಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾದಾಮಿಯಲ್ಲಿ ನಡೆದ ಮರಣವೇ ಮಹಾನವಮಿ ಎಂಬ ಕಾರ್ಯಕ್ರಮದಲ್ಲಿ ಸಾಲ ಎಂಬುದು ಶೂಲ ಎಂದು ಎಲ್ಲರನ್ನೂ ಉದ್ದೇಶಿಸಿ ಹೇಳಿದ್ದೆ. ಅವು ಕಳಕಳಿಯ ಮಾತುಗಳಾಗಿದ್ದವು. ಆದರೆ ಕೆಲವು ಮಾಧ್ಯಮಗಳಲ್ಲಿ ಸ್ವಾಮೀಜಿ ಅವರು ರೈತರ ಸಾಲ ಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದರು ಎಂದು ಪ್ರಕಟವಾಗಿದೆ. ಆ ರೀತಿ ಹೇಳಿಯೇ ಇಲ್ಲ. ಹಾಗೂ ರೈತರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಅವರು ಹೇಳಿದರು.

‘ರೈತರು ಸಂಕಷ್ಟದಲ್ಲಿರಬಾರದು, ಅವರ ಸಾಲಮನ್ನಾ ಆಗಬೇಕು. ಈ ಸರ್ಕಾರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದನ್ನು ಸಹ ಈಗಾಗಲೇ ಸ್ವಾಗತಿಸಿದ್ದೇನೆ’ ಎಂದರು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆ ವಿಷಯ ಮಾತನಾಡಲು ಬೇರೆ ವೇದಿಕೆ ಇದೆ ಎಂದರು.

ADVERTISEMENT

ಹೋರಾಟದಲ್ಲಿ ಭಾಗವಹಿಸಿದ ಕಾರಣ ಕೆಲವರಿಗೆ ಈ ಸರ್ಕಾರದಲ್ಲಿ ಸಚಿವ ಸ್ಥಾನ ತಪ್ಪಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯವೇ ಬೇರೆ ಧಾರ್ಮಿಕ ಹೋರಾಟಬೇ ಬೇರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.