ADVERTISEMENT

ಆನ್‌ಲೈನ್‌ನಲ್ಲಿ ಹಣ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 17:24 IST
Last Updated 1 ಜುಲೈ 2020, 17:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಅಮೆಜಾನ್‌ನ ಆರ್ಡರ್‌ ತಡವಾದ್ದರಿಂದ ಹಣ ವಾಪಸ್‌ ನೀಡುವಂತೆ ಗ್ರಾಹಕರ ಸಹಾಯವಾಣಿಗೆ ಕರೆ ಮಾಡಿದ್ದ ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ₹98,750 ಡ್ರಾ ಮಾಡಿ ವಂಚಿಸಿದ ಘಟನೆ ನಡೆದಿದೆ.

ಧಾರವಾಡದ ಲಕಮನಹಳ್ಳಿಯ ಮಹಿಳೆ ಈಚೆಗೆ ಅಮೆಜಾನ್‌ನಲ್ಲಿ ಕುರ್ತಾ ಆರ್ಡರ್‌ ಮಾಡಿದ್ದರು. ಸಹಾಯವಾಣಿಯ ವ್ಯಕ್ತಿಯು ಪ್ಲೇ ಸ್ಟೋರ್‌ನಿಂದ ಕ್ಯೂಎಸ್‌–ಕ್ಯುಕ್‌ ಸ್ಯಾಟಲೈನ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿ, ಆಕೆಯ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ್ದ. ಅಂತೆಯೇ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಮೊಬೈಲ್‌ಗೆ ಬಂದ ಲಿಂಕ್‌ ಮೆಸೇಜ್‌ ಅನ್ನು ಆ ವ್ಯಕ್ತಿ ನೀಡಿದ ಮೊಬೈಲ್‌ ಸಂಖ್ಯೆಗೆ ಫಾರ್ವರ್ಡ್‌ ಮಾಡಿದ್ದರು. ಆಗ ಹಂತ ಹಂತವಾಗಿ ಹಣ ವರ್ಗಾವಣೆ ಆಗಿದೆ.

ಹುಬ್ಬಳ್ಳಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ತಬೀಬಲ್ಯಾಂಡ್‌ ನಿವಾಸಿಯಾದ ರೈಲ್ವೆಯ ನಿವೃತ್ತ ನೌಕರರೊಬ್ಬರ ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ₹42,970 ಹಣವನ್ನು ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ADVERTISEMENT

ದಂಡ ವಸೂಲಿ: ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ 191 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ₹ 1,01,525 ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.