ADVERTISEMENT

ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:45 IST
Last Updated 14 ಏಪ್ರಿಲ್ 2025, 15:45 IST
ಉಪ್ಪಿಮಬೆಟಗೇರಿ ಸಮೀಪದ ಅಮ್ಮಿನಬಾವಿ ಗ್ರಾಮಸ್ಥರು ಸವದತ್ತಿ ರೇಣುಕಾ ಎಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಯೊಂದಿಗೆ ಸೋಮವಾರ ಪಾದಯಾತ್ರೆ ಕೈಗೊಂಡರು
ಉಪ್ಪಿಮಬೆಟಗೇರಿ ಸಮೀಪದ ಅಮ್ಮಿನಬಾವಿ ಗ್ರಾಮಸ್ಥರು ಸವದತ್ತಿ ರೇಣುಕಾ ಎಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಯೊಂದಿಗೆ ಸೋಮವಾರ ಪಾದಯಾತ್ರೆ ಕೈಗೊಂಡರು   

ದವನದ ಹುಣ್ಣಿಮೆ ಅಂಗವಾಗಿ ಉಪ್ಪಿನಬೆಟಗೇರಿ ಸಮೀಪದ ಅಮ್ಮಿನಬಾವಿ ಗ್ರಾಮಸ್ಥರು ನೂರಾರು ಚಕ್ಕಡಿ–ಬಂಡಿಗಳೊಂದಿಗೆ ಧಾರವಾಡ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮದಿಂದ ಸವದತ್ತಿ ರೇಣುಕಾ ಎಲ್ಲಮ್ಮನ ಗುಡ್ಡಕ್ಕೆ ಎತ್ತಿನ ಬಂಡಿ(ಚಕ್ಕಡಿ) ಯೊಂದಿಗೆ ನೂರಾರೂ ಭಕ್ತರು ಸೋಮವಾರ ಪಾದಯಾತ್ರೆ ಕೈಗೊಂಡರು.

ಪ್ರತಿವರ್ಷ ಜೈನ ಸಮಾಜದ ಗಡೇಕಾರ ಮನೆತನದಿಂದ ಈ ಪದ್ದತ್ತಿ ಅನುಸರಿಸುತ್ತ ಬರಲಾಗಿದೆ. 4 ಎಕರೆ ಜಮೀನಿನ ಇಳುವರಿಯ ಲಾಭಾಂಶ ಪಾದಯಾತ್ರೆಗಾಗಿ ಮೀಸಲಿಡುತ್ತಿರುವುದು ವಿಶೇಷವಾಗಿದೆ.

ಗಡೇಕಾರ್ ಮನೆತನದ ಸದಸ್ಯರು, ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ, ಪಮ್ಮಣ್ಣ ಧಾರವಾಡ, ಚನ್ನಬಸು ಮಾಟರ್, ಮಂಜುನಾಥ್ ಅಂಗಡಿ, ಶಾಂತಿನಾಥ ಲೋಕೂರ, ಈಶ್ವರ ಗಡೇಕಾರ, ಸಮ್ಮೇದ್ ಲೋಕೂರ, ನೇಮಿಚಂದ್ರ ನವಲೂರು, ಶರೀಫ್ ಜಾತಿಗೇರ, ಈಶ್ವರ ಶಿಂತ್ರಿ, ಬಸವರಾಜ್ ಅಣ್ಣಿಗೇರಿ ಸಹಿತ ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.