ADVERTISEMENT

ನಿತ್ರಾಣಗೊಂಡಿದ್ದ ಪಾಕ್‌ ಉಗ್ರನಿಗೆ ಚಿಕಿತ್ಸೆ: ಮರಳಿ ಜೈಲಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 11 ಮೇ 2022, 10:20 IST
Last Updated 11 ಮೇ 2022, 10:20 IST
ಪಾಕಿಸ್ತಾನದ ಉಗ್ರ ಮೊಹಮ್ಮದ್ ಫಹಾದ್
ಪಾಕಿಸ್ತಾನದ ಉಗ್ರ ಮೊಹಮ್ಮದ್ ಫಹಾದ್   

ಹುಬ್ಬಳ್ಳಿ: ಧಾರವಾಡ ಕೇಂದ್ರ ಕಾರಾಗೃಹದಿಂದ‌ ಸ್ಥಳಾಂತರಿಸುವುದು ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏಳು ದಿನದಿಂದ ಉಪವಾಸ ಕೈಗೊಂಡು ನಿತ್ರಾಣನಾಗಿದ್ದ ಪಾಕಿಸ್ತಾನದ ಉಗ್ರ ಮೊಹಮ್ಮದ್ ಫಹಾದ್ ಗೆ (42) ಇಲ್ಲಿನ‌ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಬುಧವಾರ ಮರಳಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ನಿತ್ರಾಣಗೊಂಡಿದ್ದ ಮೊಹಮ್ಮದ್ ನನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಆತನಿಗೆ ಚಿಕಿತ್ಸೆ ಕೊಡಿಸಿ, ಆಹಾರ ನೀಡಲಾಗಿದೆ. ಉಪವಾಸ ಮಾಡದಂತೆ ಮನವೊಲಿಸಲಾಗಿದ್ದು, ಆರೋಗ್ಯವಾಗಿದ್ದು ಎಂದು ಕಿಮ್ಸ್ ವೈದ್ಯಕೀಯ ಅಧಿಕಾರಿ ಡಾ. ಸಿದ್ದೇಶ್ವರ ಕಟಕೋಳ ''ಪ್ರಜಾವಾಣಿ"ಗೆ ತಿಳಿಸಿದರು.

ಕೆಆರ್ ಎಸ್ ಜಲಾಶಯ ಸೇರಿದಂತೆ ದೇಶ ವಿವಿಧ ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಮೊಹಮ್ಮದ್ ನನ್ನು 2006ರ ಅ. 26ರಲ್ಲಿ ಪೊಲೀಸರು ಬಂಧಿಸಿದ್ದರು. ಮೈಸೂರು ಜೈಲಿನಲ್ಲಿದ್ದ ಆತನನ್ನು 2021ರಲ್ಲಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ADVERTISEMENT

ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಗಿಸಬೇಕು, ತನ್ನ ಸಹಚರರು ಇರುವ ಬೆಂಗಳೂರು ಅಥವಾ ಕಾಶ್ಮೀರದ ಜೈಲಿಗೆ ತನ್ನನ್ನೂ ಸ್ಥಳಾಂತರಿಸಬೇಕು‌ ಹಾಗೂ ಸಹ ಕೈದಿಗಳ ಜೊತೆ ಬೆರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಉಪವಾಸ ಕೈಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.