ADVERTISEMENT

ರಾಮನ ನಡೆ, ಕೃಷ್ಣನ ನುಡಿಯಿರಲಿ: ಪಂ. ಬ್ರಹ್ಮಣ್ಯಾಚಾರ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 6:29 IST
Last Updated 28 ಡಿಸೆಂಬರ್ 2025, 6:29 IST
ಹುಬ್ಬಳ್ಳಿಯ ಭವಾನಿನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಜಯವಿಜಯ ತಂಡದಿಂದ ಭಜನೆ ನಡೆಯಿತು
ಹುಬ್ಬಳ್ಳಿಯ ಭವಾನಿನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಜಯವಿಜಯ ತಂಡದಿಂದ ಭಜನೆ ನಡೆಯಿತು   

ಹುಬ್ಬಳ್ಳಿ: ‘ಜಗತ್ತಿನಲ್ಲಿ ನಡೆಯುವ ಪ್ರತಿ ಚಲನೆಗೆ ಭಗವಂತನ ಸಂಕಲ್ಪವಿದೆ. ನಾವೆಲ್ಲರೂ ನಿಮಿತ್ತ ಮಾತ್ರ’ ಎಂದು ಬೆಂಗಳೂರಿನ ಪಂ. ಬ್ರಹ್ಮಣ್ಯಾಚಾರ್ಯ ಹೇಳಿದರು.

ಇಲ್ಲಿನ ಭವಾನಿನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಆರಂಭವಾದ ಉದ್ದವಗೀತೆ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ರಾಮನಂತೆ ನಡೆಯಿರಬೇಕು, ಕೃಷ್ಣ ನಂತೆ ನುಡಿಯಿರಬೇಕು. ಭಗವಂತನ ಧ್ಯಾನದಿಂದ ಮನಸ್ಸು ಶುದ್ಧಿಯಾಗುತ್ತದೆ’ ಎಂದರು.

ಜಯವಿಜಯ ಭಜನಾ ತಂಡದಿಂದ ಭಜನೆ ನಡೆಯಿತು. ಶ್ರೀಮಠದ ವ್ಯವಸ್ಥಾಪಕ ವೇಣುಗೋಪಾಲ ಆಚಾರ್ಯ, ಸಾಮಗ ಗುರುರಾಜಾಚಾರ್ಯ, ವಿಷ್ಣುತೀರ್ಥ ಕಲ್ಲೂರಕರ, ಆರ್‌.ಪಿ. ಕುಲಕರ್ಣಿ, ವಿ.ಕೆ. ಕುಲಕರ್ಣಿ, ಅಂಜಲಿ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಆರ್‌.ಎಚ್‌. ಕುಲಕರ್ಣಿ, ರಮ್ಯಾ ಮಾಧವಗುಡಿ, ರಮಾದೇವಿ ರಾಜಲಕ್ಷ್ಮಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.