
ಧಾರವಾಡ: ‘ಪಂಡಿತ ಪಂಚಾಕ್ಷರಿ ಗವಾಯಿಯವರು ಮಾನವೀಯ ಅಂತಃಕರಣ, ಕಠಿಣ ತಪಸ್ಸಿನಿಂದ ಸಂಗೀತ ಕಲಾವಿದರ ಬದುಕಿನ ದಾರಿದೀಪವಾಗಿದ್ದಾರೆ’ ಎಂದು ಡಾ. ಉಮೇಶ ಹಳ್ಳಿಕೇರಿ ಹೇಳಿದರು.
ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನದ ವತಿಯಿಂದ ಪಂ.ಪಂಚಾಕ್ಷರಿ ಗವಾಯಿಯವರ 135ನೇ ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ನಡೆದ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.
‘ಪಂಚಾಕ್ಷರಿ ಗವಾಯಿ ಅವರು ದೀನದುರ್ಬಲರ ಆಶಾಕಿರಣವಾಗಿದ್ದರು. ಸಂಗೀತ ಕಲಿಯವವರಿಗೆ ಜ್ಞಾನದ ಬೆಳಕು ನೀಡಿದವರು. ಹಿಂದೂಸ್ತಾನಿ ಗಾಯನ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು’ ಎಂದರು.
ಹಿಂದೂಸ್ತಾನಿ ಕಲಾವಿದ ಹನುಮಂತ ಬುರ್ಲಿ ಮಾತನಾಡಿ, ‘ಪಂಚಾಕ್ಷರ ಗವಾಯಿ ಅವರು ಹುಟ್ಟಿನಿಂದ ಅಂಧತ್ವ ಅನುಭವಿಸುತ್ತಲೇ ಅನೇಕ ಕಷ್ಟಗಳನ್ನು ಅನುಭವಿಸಿದರು. ಜೋಳಿಗೆ ಹಾಕಿ, ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆದರು’ ಎಂದು ತಿಳಿಸಿದರು.
ಪಂ.ಎಂ.ವೆಂಕಟೇಶಕುಮಾರ, ಉದಯಕುಮಾರ ದೇಸಾಯಿ, ಶಂಕರ ಕುಂಬಿ, ಪಿ.ಎಂ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.