ರೈಲು (ಸಾಂದರ್ಭಿಕ ಚಿತ್ರ )
ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಮೇ 12ರಂದು ರಾತ್ರಿ 12.30ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಗೋಮತಿನಗರಕ್ಕೆ ವಿಶೇಷ ರೈಲು(07389) ಹೊರಡಲಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ, ವಿಜಯಪುರ, ಸೊಲ್ಲಾಪುರ, ದೌಂಡ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಕಾನ್ಪುರ ಸೆಂಟ್ರಲ್, ಐಶ್‌ಬಾಗ್ ಮೂಲಕ ಮರುದಿನ ಬೆಳಿಗ್ಗೆ 7.45ಕ್ಕೆ ಗೋಮತಿನಗರ ತಲುಪಲಿದೆ.
ಮೇ 12ರಿಂದ ಜೂನ್ 30ರ ವರೆಗೆ ವಿಶೇಷ ರೈಲು ಸಂಚರಿಸಲಿದೆ.
ರೈಲು ಸಂಚಾರ ತಾತ್ಕಾಲಿಕ ರದ್ದು: ನಾಗವಂಗಲ– ಅಜ್ಜಂಪುರ ರೈಲು ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮೇ 10, 17, 24, 31 ಹಾಗೂ ಜೂನ್ 21ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ– ಅರಸೀಕೆರೆ ಎಕ್ಸ್‌ಪ್ರೆಸ್(16214) ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.